ಹೌದು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಒಬ್ಬರ ಮೊಬೈಲ್ ನಿಂದ ಒಬ್ಬರಿಗೆ ರವಾನೆಯಾಗುತ್ತಿದ್ದು ಇದು ಸುಳ್ಳಾ ಅಥವಾ ನಿಜಾನಾ ಅನ್ನೋ ಕನ್ಫ್ಯೂಷನ್ ನಲ್ಲಿ ಜನರಿದ್ದಾರೆ ಹಾಗಾದರೆ ಇದು ಸುಳ್ಳಾ ಅಥವಾ ನಿಜಾನಾ ಅಂತ ನೋಡೋಣ ಬನ್ನಿ 2024ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಜನರು ಬಿಜೆಪಿಗೆ ಮತ ಹಾಕಲು,ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಏರ್ ಟೆಲ್,BSNL,ಜಿಯೋ ಸೇರಿ ಎಲ್ಲಾ ಭಾರತೀಯ ಮೊಬೈಲ್ ಬಳಕೆದಾರರಿಗೆ ಮೂರು ತಿಂಗಳ ಕಾಲ ಮೊಬೈಲ್ ಗೆ ಉಚಿತ ರೀಚಾರ್ಜ್ ಯೋಜನೆ ಕಲ್ಪಿಸಿದ್ದಾರೆ ಮೂರು ತಿಂಗಳ ರೀಚಾರ್ಜ್ ಸೌಲಭ್ಯ ಪಡೆಯಲು ಈ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಅಕ್ಟೋಬರ್ 31 ಕೊನೆಯ ದಿನವಾಗಿದ್ದು,ಅಷ್ಟರೊಳಗೆ ಲಿಂಕ್ ಕ್ಲಿಕ್ ಮಾಡಿ ಪ್ರಯೋಜನ ಪಡೆಯಿರಿ ಎನ್ನುವ ಲಿಂಕ್
ಕಳುಹಿಸಲಾಗುತ್ತಿದೆ ಇದರ ಸತ್ಯಾಸತ್ಯತೆಯನ್ನು ತಿಳಿಯದ ಅನೇಕರು ಫಾರ್ವರ್ಡ್ ಮಾಡುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿ ಬೇಸ್ತು ಬೀಳುತ್ತಿದ್ದಾರೆ ಲಿಂಕ್ ಕ್ಲಿಕ್ ಮಾಡಿದ ನಂತರ ಮೊಬೈಲ್ ನಂಬರ್ ಪಡೆದುಕೊಂಡು ಇದನ್ನು 10 ಜನರಿಗೆ
ಶೇರ್ ಮಾಡಿ ಎಂದೆಲ್ಲಾ ಹೇಳಲಾಗುತ್ತಿದೆ. ಅಂದಹಾಗೆ ಇದೆಲ್ಲಾ ಸುಳ್ಳು ಸುದ್ದಿ ಬಿಜೆಪಿ,ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹೆಸರಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿವೆ ಸರ್ಕಾರದಿಂದ ಇಂತಹ ಯಾವುದೇ ರೀಚಾರ್ಜ್ ಯೋಜನೆಗಳನ್ನು ಜಾರಿ ಮಾಡಿಲ್ಲ. ಇಂತಹ ಯಾವುದೇ ಸಂದೇಶ,ಲಿಂಕ್ ಬಂದಲ್ಲಿ ಕ್ಲಿಕ್, ಫಾರ್ವರ್ಡ್ ಮಾಡದೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
ವರದಿ:ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.