ಬೀದರ್ ಜಿಲ್ಲೆಯ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದರೋಡೆ,ಮನೆ ಕಳ್ಳತನ,ಅಕ್ರಮ ಗಾಂಜಾ ಪ್ರಕರಣಗಳನ್ನು ಕಳೆದ 10 ದಿನಗಳಲ್ಲಿ ಪತ್ತೆ/ದಾಳಿ ಮಾಡಿ 94 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳ ವಶ ಪಡಿಸಿಕೊಳ್ಳಲಾಗಿದೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಹುಮನಾಬಾದ ಡಿ.ಎಸ್ಪಿ ಶ್ರೀ,ನ್ಯಾಮೆಗೌಡ,ಶ್ರೀ, ಶಿವನಗೌಡ ಪಾಟೀಲ್,ಶ್ರೀ ಶಿವಾನಂದ ಪವಾಡಶೆಟ್ಟಿ ರವರ ನೇತೃತ್ವದಲ್ಲಿ ತಮ್ಮ ತಮ್ಮ ಉಪ-ಭಾಗದ ವೃತ್ತ ನಿರೀಕ್ಷಕರಾದ ಶ್ರೀ,ಮಹೇಶ ಗೌಡ ಪಾಟೀಲ್, ಶ್ರೀ,ಫುಲಯ್ಯಾ ರಾಠೋಡ್,ಶ್ರೀ ರಘುವೀರಸಿಂಗ್ ಠಾಕೂರ್,ಶ್ರೀ ಹನುಮರೆಡ್ಡೆಪ್ಪಾ ಪಿ.ಐ ರವರ ತಂಡವನ್ನು ರಚಿಸಿದ್ದು,ಅಧಿಕಾರಿ ಹಾಗೂ ಸಿಬ್ಬಂದಿಯವರ ಸತತ ಪ್ರಯತ್ನದಿಂದ
1)ಬೇಮಳಖೇಡಾ ಠಾಣೆಯ ದರೋಡೆ ಪ್ರಕರಣದಲ್ಲಿ ಕೇವಲ 48 ಗಂಟೆಗಳಲ್ಲಿ ಕಳುವಾದ 694 ಜಿ.ಎಮ್ ಕಂಪನಿಯ ಫ್ಯಾನ್ ಬಾಕ್ಸ್,ಒಂದು ಕಂಟೆನರ್ 50,76,156=00 ರೂಪಾಯಿ ಮೌಲ್ಯದವುಗಳು
2)ಬೀದರ ನಗರ ಠಾಣೆಯ ದರೋಡೆ,ಕೊಲೆ ಯತ್ನ, ಆಮ್ಸ್ ಪ್ರಕರಣದಲ್ಲಿ ನಗದು ಹಣ,ಒಂದು ಕಾರು, ಮೊಬೈಲ್,(ಮಹಾರಾಷ್ಟ್ರ ಪೊಲೀಸರು ವಶ ಪಡಿಸಿಕೊಂಡ ನಾಡ ಪಿಸ್ತೂಲ್,2 ಜೀವಂತ ಗುಂಡುಗಳು) 5,00,000 ರೂಪಾಯಿ ಮೌಲ್ಯದ ವಸ್ತುಗಳು
3)ಗಾಂಧಿಗಂಜ ಪೊಲೀಸ್ ಠಾಣೆ ಮತ್ತು
4)ಮಾರ್ಕೇಟ್ ಪೊಲೀಸ್ ಠಾಣೆಯ ಮನೆ ಕಳ್ಳತನ ಪ್ರಕರಣಗಳಲ್ಲಿ 180 gm ಬಂಗಾರದ ಆಭರಣ,2 kg ಬೆಳ್ಳಿಯ ಆಭರಣ,ನಗದು ಹೀಗೆ ಒಟ್ಟು 12,82,000 ರೂಪಾಯಿ ಮೌಲ್ಯದವುಗಳು,
5)ಸಂತಪೂರ ಠಾಣೆಯ ಬಾರ್ಡರ ತಾಂಡಾದಲ್ಲಿ 179 (63.86 kg) ಹಸಿ ಗಾಂಜಾದ ಗಿಡ 25,54,400=00 ರೂಪಾಯಿ ಮೌಲ್ಯದ ಗಾಂಜಾ ಹೀಗೆ ಒಟ್ಟು 5 ಠಾಣೆಯಲ್ಲಿ ಒಟ್ಟು 94,12,556=00 ಮೌಲ್ಯದವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇಂತಹ ಘೋರ ಪ್ರಕರಣದ ಪತ್ತೆ ಹಚ್ಚುವಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಶಾಘಿಸಿ,ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ…
ವರದಿ- ರೋಹನ್ ವಾಘಮಾರೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.