ಬೀದರ್:ನಿಟ್ಟೂರ್ ಗ್ರಾಮದಲ್ಲಿ ಸೈಬರ್ ಸೆಕ್ಯೂರಿಟಿ ಕುರಿತು ಜನರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಗ್ರಾಮದ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಾಲಿವನ್ ಪಾಟೀಲ್ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಆಪ್ಗಳು ಬಳಕೆಯಿಂದ ವಂಚನೆಗೆ ಒಳಗಾಗುತ್ತಿದ್ದೇವೆ ಯಾವುದೋ ಗೊತ್ತಿಲ್ಲದ ಕರೆಗಳಿಗೆ ಓಟಿಪಿ ಶೇರ್ ಮಾಡುವುದು ಮತ್ತು ನಮ್ಮ ಪರ್ಸನಲ್ ಡೀಟೇಲ್ಸ್ ಅನ್ನು ಯಾರ ಜ್ಯೋತೆಗೆ ಹಂಚಿಕೊಳದರಿಂದ ಮೋಸಕ್ಕೆ ದಾರಿ ಮಾಡಿಕೊಡುತ್ತೇವೆ ಇದರಿಂದ ಜನರು ಗೊತ್ತಿಲ್ಲದವರು ಅಥವಾ ಗೊತ್ತಿದ್ದು ತುಂಬಾ ಮೋಸ ಹೋಗುತ್ತಿದ್ದಾರೆ,ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಮತ್ತು ಡೆಲ್ ಟೆಕ್ನಾಲಜೀಸ್ ಕಡೆಯಿಂದ ಶ್ರೀ ದಯಾನಂದ್ ಹಿರೇಮಠ ಸರ್ ಅವರು ನಮ್ಮ ಊರಿನಲ್ಲಿ ಸೈಬರ್ ಸೆಕ್ಯೂರಿಟಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಚಿಕ್ಕ ಮಕ್ಕಳ ನಾಟಕದ ಮೂಲಕ ನಾವು ಯಾವುದೇ ಕರೆಗಳನು ರಿಸೀವ್ ಮಾಡಿ ಅವರೊಂದಿಗೆ ಓಟಿಪಿಯನ್ನು ಹಂಚಿಕೊಳ್ಳಬಾರದು ಮತ್ತು ಯಾವುದೇ ಅನ್ಯ ಲಿಂಕ್ ಗಳನ್ನೂ ಡೌನ್ ಲೋಡ್ ಮಾಡಿಕೊಳ್ಳಬಾರದು ಎಂದು ನಮ್ಮ ಜನರಿಗೆ ತುಂಬಾ ಅಚ್ಚುಕಟ್ಟಾಗಿ ಮನವರಿಕೆ ಮಾಡಿಕೊಟ್ಟಂತಹ ಶ್ರೀದಯಾನಂದ್ ಹಿರೇಮಠ ಅವರಿಗೆ ನನ್ನ ಕಡೆಯಿಂದ ಹಾಗೆ ನಮ್ಮ ಊರಿನ ಕಡೆಯಿಂದ ಅವರಿಗೆ ತುಂಬು ಹೃದಯದ ಧನ್ಯವಾದಗಳು ಈ ಸಂದರ್ಭದಲ್ಲಿ ಊರಿನ ಹಿರಿಯ ಸದಸ್ಯರಾದಂತಹ ಶ್ರೀ ಚಂದ್ರಕಾಂತ್ ಪಾಟೀಲ್,ಶ್ರೀ ಶಿವಕುಮಾರ್ ಮಠಪತಿ,ಶ್ರೀಮತಿ ಶ್ರೀದೇವಿ ಶಾಲಿವನ್ ಪಾಟಿಲ್,ಮಹಿಳೆಯರು ಮತ್ತು ಮಕಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.