ಬೀದರ್/ಭಾಲ್ಕಿ:
ಡಾ.ಓಂಕಾರ್ ಸ್ವಾಮಿ ಅವರ ಏಳನೇ ಪುಣ್ಯಸ್ಮರಣೆ ನಿಮಿತ್ತ ಹಲ್ಬರ್ಗ ಗ್ರಾಮದ ಮಲ್ಲಿನಾಥ ಆಯುರ್ವೇದ ಫಾರ್ಮಸಿಯಲ್ಲಿ ಅಕ್ಟೋಬರ್ 26ರಂದು ಬೆಳಿಗ್ಗೆ 11 ರಿಂದ ಸಂಜೆ 4 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಬೆಂಗಳೂರಿನ ಶತಾಯು ಆಯುರ್ವೇದ ಕೇಂದ್ರದ ಡಾ.ಮೃತ್ಯುಂಜಯ ಸ್ವಾಮಿ,ಡಾ.ಅನಿತಾ ಸ್ವಾಮಿ,ಶುಭ್ರ ಆರೋಗ್ಯ ಧಾಮದ ಡಾ.ನಂಜುಂಡಯ್ಯ ಸ್ವಾಮಿ ಡಾ.ಪ್ರಭಾ ಸ್ವಾಮಿ ಹಾಗೂ ಮಲ್ಲಿನಾಥ ಆಯುರ್ವೇದ ಫಾರ್ಮಸಿಯ ಡಾ.ತ್ರಿಪುರಾಂತ ಸ್ವಾಮಿ ಶಿಬಿರ ನಡೆಸಿ ಕೊಡಲಿದ್ದಾರೆ.ರೋಗಿಗಳಿಗೆ ಉಚಿತ ಹೋಮಿಯೋಪತಿ ಔಷಧ ವಿತರಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9620201901 ಅಥವಾ 8884541901 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.
ಜಿಲ್ಲೆಯ ಜನ ಶಿಬಿರದ ಲಾಭ ಪಡೆಯಬೇಕು ಎಂದು ಶುಭ್ರ ಆರೋಗ್ಯಧಾಮದ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ವರದಿ:ರೋಹನ ವಾಘಮಾರೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.