ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿಯ ತೊಳಸಿಕೆರೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮನ್ಯ ಜನರಿಗೆ ರಾಜ್ಯ ಸರ್ಕಾರದ ಯೋಜನೆಯನ್ನು ತಿಳಿ ಹೇಳಿ ನೈಜ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವುದೆ ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ತಹಶಿಲ್ದಾರಾದ ಎಂ ಗುರುಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ತೊಳಸಿಕೆರೆ ಗ್ರಾಮದಲ್ಲಿ ನಡೆದ ಪಿಂಚಣಿ ಅದಾಲತ್ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ
ಒಟ್ಟು 18 ಅರ್ಜಿಗಳು ಸಲ್ಲಿಕೆಯಾದವು ಅವುಗಳ ಪೈಕಿ
12 ಪೌತಿ,1 O yA P,2 DWP,
3 ತಿದ್ದುಪಡಿ ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ಗ್ರಾಮ ಆಡಳಿತ ಅಧಿಕಾರಿ ವಿನೋದ್ ತಿಳಿಸಿದರು.ಇದೇ ಸಮಯದಲ್ಲಿ ಗ್ರಾಮಸ್ಥರು
ರಸ್ತೆ,ಕುಡಿಯುವ ನೀರು ವಿದ್ಯುತ್ ಸಮಸ್ಯೆ ಕುರಿತು ಅರ್ಜಿ ಸಲ್ಲಿಸಿದರು ಹಾಗೂ ಸ್ಥಳದಲ್ಲೇ ಎರಡು ಆದೇಶ ಪ್ರತಿಗಳನ್ನು ಅಧಿಕಾರಿಗಳು ನೀಡಿದರು. ಇದೇ ಸಂದರ್ಭದಲ್ಲಿ,ಉಪ ತಹಶಿಲ್ದಾರರಾದ ಸುರೇಖ,ಆರ್ ಐ ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು..
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.