ರಾಯಚೂರು ಜಿಲ್ಲೆಯ
ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ಷನ್ ಸೊಸೈಟಿ ಸೆಂಟ್ ಲುಕ್ ಮೆಡಿಕಲ್ ಸೊಸೈಟಿ ಸಂಪರ್ಕ ಕಾರ್ಯಕರ್ತ ಯೋಜನೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತುರವಿಹಾಳ ಗ್ರಾಮ ಪಂಚಾಯತ ಗುಂಜಳ್ಳಿ ಅವರ ಸಂಯುಕ್ತ ಆಶ್ರಯದಲ್ಲಿ ಹೊಸಹಳ್ಳಿ ಕೆ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಸಂಪರ್ಕ ಕಾರ್ಯಕರ್ತ ಯೋಜನೆ ಕುರಿತು ಮಾತನಾಡಿದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಶ್ರೀ ನಾಗರಾಜ್ ಅವರು ಮಾತನಾಡಿ ಸರ್ಕಾರ 2030 ರ ಒಳಗೆ ದೇಶದಲ್ಲಿ ಎಚ್ಐವಿ ಅನ್ನು ಸೊನ್ನೆಗೆ ತರುವ ಗುರಿ ಹೊಂದಿದ್ದು ಆ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ 100 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಸಂಪರ್ಕ ಕಾರ್ಯಕರ್ತ ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ ಹಳ್ಳಿಗಳಲ್ಲಿ ಅಪಾಯಕಾರಿ ನಡವಳಿಕೆ ಉಳ್ಳ,ಅಪಾಯದ ಹಂಚಿನಲ್ಲಿರುವ ಜನರನ್ನು ಪತ್ತೆ ಹಚ್ಚಿ ಅವರಿಗೆ ಹೆಚ್ ಐ ವಿ ರಕ್ತ ತಪಾಸಣೆಗೆ ಮಾಡಿಸುವುದಲ್ಲದೆ ಸರ್ಕಾರದ ಇತರ ಆರೋಗ್ಯ ಸೇವೆಗಳಿಗೆ ಲಿಂಕ್ ಮಾಡಿಸಲಾಗುತ್ತದೆ ಎಂದು ಹೇಳಿದರು.
ಆರೋಗ್ಯ ಕೇಂದ್ರದ PHCO ಶ್ರೀಮತಿ ಮೊದಿನಬೀ ಯವರು ಮಾತನಾಡಿ ಜನರು ಆರೋಗ್ಯ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸದರಿ ಶಿಬಿರದಲ್ಲಿ ಗ್ರಾಮದ ಜನರಿಗೆ ಬಿಪಿ ಶುಗರ್, ಕ್ಷಯ ತಪಾಷಣೆ ರಕ್ತದ ಹಿಮೋಗ್ಲೋಬಿನ ಇನ್ನಿತರ ರೋಗಗಳ ತಪಾಸಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಯೋಗ ಶಾತ್ರಜ್ಞರಾದ ಯಲ್ಲಮ್ಮ,ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಅಮರೇಶ ಕಲ್ಮಂಗಿ,ವಲಯ ಮೇಲ್ವಿಚಾರಕ ರಾಯಪ್ಪ,ಆಶಾ ಕಾರ್ಯಕರ್ತೆಯರಾದ ದೇವಮ್ಮ,ಹನುಮಂತಮ್ಮ, ಅಂಗನವಾಡಿ ಕಾರ್ಯಕರ್ತರಾದ ರಂಜಾನ್ ಬೀ,ಶಂಕ್ರಮ್ಮ,ಮಗ್ಗೆಮ್ಮ,ಸುನಿತಾ,ಶಾಲೆಯ ಶಿಕ್ಷಕರಾದ ಹುಸೇನ್ ಸಾಬ್,ದೊಡ್ಡಪ್ಪ,ಛತ್ರಪ್ಪ, ಕಲ್ಲನಗೌಡ,ಕ್ಲಸ್ಟರ್ ಇನ್ ಕರ್ಕ್ ಬಾನೂಬೀ, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಶಂಕ್ರಪ್ಪ ಹುಲ್ಲೂರು,ಚನ್ನಪ್ಪ,ರಮೇಶ ಉಳ್ಳಿ,ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.