ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದಲ್ಲಿ ಆಯೋಜಿಸಿದ್ದ “ಆದಿಕವಿ” ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಡಾ.ಚಂದ್ರು ಕೆ.ಲಮಾಣಿ ಯವರು ಭಾಗವಹಿಸಿ,ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನ ಸಲ್ಲಿಸಿದರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸಮಾಜದ ಬೆಳವಣಿಗೆಗೆ ಬಹಳಷ್ಟು ಜನರು ತನು-ಮನ ಧನ ಸಹಾಯ ಮಾಡಿ ಎಳೆಮರೆಯ ಕಾಯಿಯಾಗಿ ಕೆಲಸಮಾಡುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಸರಕಾರ ಯೋಜನೆಯ ಸಹಾಯ ಪಡೆಯಲು ಅಸಕ್ತರಾಗಿದ್ದಾರೆ ಸಮಾಜಯದಲ್ಲಿ ಯಾರೋ ಒಬ್ಬರು ಮುಂದುವರೆದು ಎಲ್ಲಾ ಸೌಲಭ್ಯ ಪಡೆದು ಇನ್ನುಳಿದವರು ಸೌಲಭ್ಯ ವಂಚಿತರಗುತ್ತಿದ್ದಾರೆ. ನಾನು ಹೇಳುವದೇನೆಂದರೆ ಸಮಾಜದ ಪ್ರತಿಭಾವಂತ ಯುವಕರು ಮನೆಯಲ್ಲಿ ಕುಳಿತರೆ ಅಭಿವೃದ್ಧಿ ಶೂನ್ಯವಾಗುತ್ತದೆ ಕಲಿಕೆಯ ಜೊತೆಗೆ ಮನೆ ಬಿಟ್ಟು ಸಮಾಜದ ಕೆಲಸದಲ್ಲಿ ಭಾಗಿಯಾಗಬೇಕು ಅಂದಾಗ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು ಹಾಗೂ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನೆರವೇರಿಸಿದರು.
ಈ ವೇಳೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ದಂಡಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಮಾಜದ ತಾಲೂಕ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಲಕ್ಷ್ಮೇಶ್ವರ ಪುರಸಭೆಯ ಸದಸ್ಯರುಗಳು,ಗ್ರಾಂ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.