ಕಲಬುರಗಿ:ಕನ್ನಡಕ್ಕಾಗಿ ಹೋರಾಟ ಮಾಡಿರುವ, ಕನ್ನಡ ಸೇವೆ ಸಲ್ಲಿಸುತ್ತಿರುವ ಪ್ರಾಮಾಣಿಕರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು ಎಂದು ಕರವೇ(ಪ್ರವೀಣ ಶೆಟ್ಟಿ ಬಣ)ದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಅವರು ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿಗಾಗಿ ಹಲವಾರು ಜನರು ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದ ಅವರು,ರಾಜ್ಯ ಪ್ರಶಸ್ತಿ ನೀಡುವ ವೇಳೆ ಕನ್ನಡದ ಅಭಿವೃದ್ಧಿಗೆ ಕ್ರಿಯಾತ್ಮಕವಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇವಲ ಸಾಹಿತ್ಯ ಕ್ಷೇತ್ರವನ್ನು ಮಾತ್ರ ಪರಿಗಣಿಸಿದ್ದು,ಉಳಿದ ಹಲವು ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಅಲ್ಲದೆ,ಈ ಹಿಂದೆ ಪ್ರಶಸ್ತಿ ಪಡೆದವರಿಗೆ ಮತ್ತೆ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಿದೆ ಹೀಗಾಗಿ,ಈಗಾಗಲೇ ಪ್ರಶಸ್ತಿ ಪಡೆದವರನ್ನು ಮರು ಆಯ್ಕೆ ಮಾಡಬಾರದು ಹಾಗೂ ಸರಕಾರದ ಬೇರೆ ಬೇರೆ ಇಲಾಖೆ ನೀಡುವ ಪ್ರಶಸ್ತಿಯನ್ನು ಪಡೆದವರನ್ನು ಪರಿಗಣಿಸದೆ,ಕನ್ನಡ ಸೇವೆ ಮಾಡುತ್ತಿರುವ ಹಿರಿಯ ಮತ್ತು ಕಿರಿಯರನ್ನು ಗುರುತಿಸಬೇಕು ಎಂದು ಅವರು ಆಗ್ರಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.