ಹನೂರು:ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ಮಹಾಗ್ರಂಥದ ಪಾತ್ರಗಳು ಮತ್ತು ಪಾತ್ರಗಳ ನಡುವಿನ ಸಂಬoಧಗಳ ಮಹತ್ವವನ್ನು ಅರಿತು ನಾವೆಲ್ಲಾ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ಬಣ್ಣಿಸಿದರು.
ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ರಾಮಾಪುರ ಮತ್ತು ಹನೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ‍್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ‍್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆಗೈದು ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ನರೇಂದ್ರ ಮಹರ್ಷಿ ವಾಲ್ಮೀಕಿ ಅವರು ಮೊದಲು ಬೇಡರಾಗಿದ್ದರು ಕಾಲಕ್ರಮೇಣ ನಾರದ ಮಹರ್ಷಿಗಳ ಹಿತನುಡಿಗೆ ಕಟ್ಟುಬಿದ್ದು ವರ್ಷಾನುಗಟ್ಟಲೇ ರಾಮ ನಾಮವನ್ನು ಜಪಿಸಿದರು. ಬಳಿಕ ರಾಮಾಯಣ ಮಹಾಗ್ರಂಥವನ್ನು ರಚಿಸಿದರು ಈ ರಾಮಾಯಣ ಗ್ರಂಥ ಪ್ರಪಂಚದಾದ್ಯoತ ವಿವಿಧ ಭಾಷೆಗಳಲ್ಲಿ ಅನುವಾದಗೊಂಡು ವಿಶ್ವಪ್ರಸಿದ್ಧ ಪಡೆದಿದೆ ರಾಮಾಯಣ ಮಹಾಗ್ರಂಥದಲ್ಲಿ ರಾಮ-ಲಕ್ಷ್ಮಣರ ಸೋದರ ಸಂಬಂಧದ, ರಾಮ-ಸೀತೆಯರ ಪತಿ-ಪತ್ನಿ ಸಂಬಂಧದ ಬಗ್ಗೆ ಅರಿತು ನಾವು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗಾದಾಗ ಮಾತ್ರ ವಾಲ್ಮೀಕಿ ಮಹರ್ಷಿ ಹಾಗೂ ಇನ್ನಿತರ ಮಹಾನು ಪುರುಷರ ಆಚರಣೆಗಳಿಗೆ ಅರ್ಥ ದೊರೆತಂತಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ನಾಯಕ ಸಮುದಾಯದ ವತಿಯಿಂದ ಮಾಜಿ ಶಾಸಕ ನರೇಂದ್ರ ಅವರಿಗೆ ಮೈಸೂರು ಪೇಟ ತೊಡಿಸಿ,ಹಾರ-ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.
ಕಾರ‍್ಯಕ್ರಮದಲ್ಲಿ ಕೊಳ್ಳೇಗಾಲ ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಮಾದನಾಯ್ಕ,ಪ.ಪಂ ಸದಸ್ಯರಾದ ಸುದೇಶ್,ಗಿರೀಶ್,ಹರೀಶ್ ಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್,ಕಾರ‍್ಯದರ್ಶಿ ಉದ್ದನೂರು ಸಿದ್ಧರಾಜು,ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು,ಪಾಳ್ಯ ಕೃಷ್ಣ,ಉದ್ದನೂರು, ಶಿವಣ್ಣ,ಅಜ್ಜೀಪುರ ಮುರುಡೇಶ್ವರ ಸ್ವಾಮಿ,ಬಂಡಳ್ಳಿ ವೆಂಕಟೇಶ್ ಇನ್ನಿತರರು ಹಾಜರಿದ್ದರು.
ವಿವಿಧೆಡೆ ಜಯಂತಿ ಆಚರಣೆ:ಹನೂರು ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿ ಗೃಹದ ಆವರಣದಲ್ಲಿ ತಾಲೂಕು ಆಡಳಿತದವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು. ಪಟ್ಟಣ ಪಂಚಾಯಿತಿ ಕಚೇರಿ,ತಾಲೂಕು ಪಂಚಾಯಿತಿ ಕಚೇರಿ ಸೇರಿದಂತೆ ವಿವಿಧೆಡೆ ಸಂಭ್ರಮದಿoದ ಜಯಂತಿ ಆಚರಣೆ ಮಾಡಲಾಯಿತು.
ವರದಿ ಉಸ್ಮಾನ್ ಖಾನ್