ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಜ್ಜಲ ಗ್ರಾಮದಲ್ಲಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಜಲ ಗ್ರಾಮಸ್ಥರಿಂದ ಆಚರಿಸಲಾಯಿತು ಈ ಕಾರ್ಯಕ್ರಮವನ್ನು ಹಿರಿಯರಿಂದ ಭಕ್ತಿ ಗೀತೆ ಹಾಡುವುದರ ಮೂಲಕ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಮಾಡುತ್ತಾ ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ಆಚರಿಸಿದರು.ಈ ಕಾರ್ಯಕ್ರಮದಲ್ಲಿ ವಜ್ಜಲ ಗ್ರಾಮದ ಮುಖಂಡರುಗಳಾದ ರಾಜಶೇಖರ್ ಗೌಡ ಪಾಟೀಲ್,ಶರಣಗೌಡ ಪಾಟೀಲ್,ಸಂತೋಷ್ ಹುಂಡಿಕಾರ,ಭೀಮರಾಯ ದೊಡ್ಡಮನಿ,ಸಂಗಮೇಶ್ ದೊರೆ ವಜ್ಜಲ ಯಲ್ಲಾಲಿಂಗ ಎಸ್. ದೊರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
