ಕಲಬುರ್ಗಿ:ಇಂದು ಬೆಳ್ಳಂಬೆಳಿಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಹೆಡೆಮುರಿ ಕೊಟ್ಟಿದಾರೆ.ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ ಡಾಂಗೆ ಅವರ ಮನೆ ಕಲಬುರ್ಗಿ ಮಾಕಾ ಲೇಔಟ್ ನಲ್ಲಿರುವ ಮನೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನೋರ್ವ ದೇವದುರ್ಗ ತಾಲೂಕಿನ ಕೆ.ಬಿ.ಜೆ.ಎನ್.ಎಲ್ ಇಇ ಅಧಿಕಾರಿ ತಿಪ್ಪಣ್ಣ ಅನ್ನದಾನಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ತಿಪ್ಪಣ್ಣ ಅನ್ನದಾನಿ ಅವರ ಕಲಬುರ್ಗಿ ಭಾಗ್ಯವಂತಿ ನಗರದ ಮನೆಯ ಮೇಲೆ ದಾಳಿ ನಡೆದಿದ್ದು,ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡ ಪರಿಶೀಲಿಸಲಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ.
ಈ ಇಬ್ಬರೂ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆಯ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಲಾಗಿತ್ತು ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಬಿಡುಬಿಟ್ಟು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್