ಕಲಬುರಗಿ ನಗರದ ಖಾಜಾ ಬಂದಾನವಾಜದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸೋಮವಾರ ಸೈಬರ್ ಭದ್ರತೆ ಜಾಗೃತಿ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು ಕಲಾ,ಮಾನವೀಕತೆ,ಭಾಷಾ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯದ ಡೀನ್ ಡಾ.ನಿಶಾತ್ ಆರೀಫ್ ಹುಸೇನಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಉಪನ್ಯಾಸದಲ್ಲಿ ಕೆಬಿಎನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಶಿರೀನ ಫಾತಿಮಾ ಮತ್ತು ಆಯೇಷಾ ಕಿರಣ ಭಾಗವಹಿಸಿದ್ದರು.
ಆಯೇಷಾ ಕಿರಣ ಅವರು ಸೈಬರ್ ಭದ್ರತೆ,ಸೈಬರ್ ಸ್ಪೇಸ್, ಸೈಬರ್ ಭದ್ರತಾ ಬೆದರಿಕೆಗಳ ವಿಧಗಳು,ಸೈಬರ್ ಭದ್ರತಾ ಮೂಲ ಪರಿಶೀಲನಾಪಟ್ಟಿ,ಸೈಬರ್ ಅಪರಾಧಕ್ಕೆ ಸುರಕ್ಷತಾ ಸಲಹೆ ಇವುಗಳ ಬಗ್ಗೆ ಮಾತನಾಡಿದರು.
ಶಿರೀನ್ ಫಾತಿಮಾ ಇವರು ಸೈಬರ್ ಭದ್ರತೆ ಬಗ್ಗೆ ಜಾಗೃತಿ,ಸೈಬರ ಕಾನೂನು,ಸೈಬರ್ ಅಪರಾಧಗಳನ್ನು ಹೇಗೆ ವರದಿ ಮಾಡುವುದು ಎಂಬುದನ್ನು ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ನೀಡಿದರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಸಹಾಯಕ ಪ್ರಾಧ್ಯಪಾಕರು ಹಾಜರಿದ್ದರು ಸೈದ ಖಾತಿಜ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ,ಪರಿಚಯ ನೀಡಿ ನಿರೂಪಣೆ ಮಾಡಿದರೆ ಫೈಝ ನಾಜ ವಂದಿಸಿದರು.
ವರದಿ:ಅಪ್ಪಾರಾಯ ಬಡಿಗೇರ