ಕಲಬುರಗಿ:ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ಹಚ್ಚಿರುವುದನ್ನು ಕನ್ನಡ ಭೂಮಿ ಜಾಗೃತಿ ಸಮಿತಿಯ ಉತ್ತರ ಕರ್ನಾಟಕ ವಕ್ತಾರ ಆನಂದ ತೆಗನೂರ ಅವರು ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಬೀದರ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಕೆ.ಎ.38 ಎಫ್. 1201 ಸಂಖ್ಯೆ ಬಸ್ಸಿಗೆ ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದ ಬಳಿ ಬೆಂಕಿ ಹಚ್ಚಿದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು ಮರಾಠಾ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೂ ಕರ್ನಾಟಕ ಬಸ್ ಗೆ ಬೆಂಕಿ ಹಚ್ಚಿರುವುದಕ್ಕೂ ಏನು ಸಂಬಂಧ?ಎಂದು ಅವರು ಪ್ರಶ್ನಿಸಿದರು.ಜಾಲ್ನಾ ಜಿಲ್ಲೆಯ ವಡಿಗೋದ್ರಿ ಬಳಿಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಯುವ ವೇಳೆ ಕರ್ನಾಟಕ ಬಸ್ ಗೆ ಬೆಂಕಿ ಹಚ್ಚಿದ್ದಾರೆ.ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವುದು ಕರ್ನಾಟಕ ಸರಕಾರವೋ?ಇಲ್ಲ ಮಹಾರಾಷ್ಟ್ರ ಸರಕಾರವೋ? ಅಲ್ಲಿನ ಹೋರಾಟಗಾರ ಮನೋಜ ಜಾರಂ ಅವರಿಗೆ ಬುದ್ದಿ ಭ್ರಮಣೆ ಆಗಿದೆ. ಮಹರಾಷ್ಟ್ರದಲ್ಲಿ ಕರ್ನಾಟಕ ಬಸ್ ಗೆ ಬೆಂಕಿ ಹಚ್ಚಿದರೆ ನಿಮಗೆ ಮೀಸಲಾತಿ ಸಿಗುವುದಿಲ್ಲ ಅದರ ಬದಲಾಗಿ ಬೇರೆ ಮಾರ್ಗ ಹುಡುಕಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವುದು ಮಹರಾಷ್ಟ್ರ ಸರಕಾರ ಹೊರತು ಕರ್ನಾಟಕ ಸರಕಾರ ಅಲ್ಲ ಕೂಡಲೇ ಮಹಾರಾಷ್ಟ್ರ ಸರಕಾರದಿಂದ ಕರ್ನಾಟಕ ಸಾರಿಗೆ ಸಂಸ್ಥೆಗೆ ಆದ ನಷ್ಟ ಪರಿಹಾರವನ್ನು ಮಹಾರಾಷ್ಟ್ರ ಸರಕಾರವೇ ವೆಚ್ಚವನ್ನು ಭರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.