ಇಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪಂಪ ಮಹಾಕವಿಯವರ ವೃತ್ತದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ 50ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.ಈ ಸಮಯದಲ್ಲಿ ಶ್ರೀ ರಂಬಾಪುರಿ ಶ್ರೀ ಶ್ರೀ 1008 ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ಬಾಳೆಹೊನ್ನೂರ ಸಾನಿಧ್ಯವಹಿಸಿದ್ದರು ಮಾಜಿ ಶಾಸಕರಾದ ಶ್ರೀ ಗಂಗಣ್ಣ ಮಹಾಂತಾಶೆಟ್ಟರ,ಶ್ರೀ ವಿಜಯ ಹತ್ತಿಕಾಳ, ಶ್ರೀ ಮೆಕ್ಕಿ ಮತ್ತು ಸಹೋದರರು,ಗಂಗಣ್ಣ ಮೇನಶಿನಕಾಯಿ,ಆಟೋ ಚಾಲಕ ಸಂಘದವರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ
ಶ್ರೀಗಳು ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನಮ್ಮ ನೆಲ,ಜಲ,ಭಾಷೆಯ ಬಗ್ಗೆ ನಮ್ಮ ಶಾಲಾ -ಕಾಲೇಜು ಮಕ್ಕಳಿಗೆ,ಮಹಿಳೆಯರಿಗೆ ಭಾಷಾಭಿಮಾನ ಬೆಳಸಬೇಕಾಗಿದೆ ನಮ್ಮ ಪಾಲಕರು ಕೇವಲ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಮಾತ್ರ ಜಾಣರಾಗುತ್ತಾರೆ ಅನ್ನೋ ಮನಸ್ಥಿತಿಯಲ್ಲಿ ಇದ್ದಾರೆ ದಯಮಾಡಿ ನಮ್ಮ ಭಾವಿ ಪ್ರಜೆಗಳಲ್ಲಿ ನಮ್ಮ ಕನ್ನಡ ನಾಡು-ನುಡಿಯ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ವರದಿ-ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.