ಸೊರಬ:ಖಚಿತ ಮಾಹಿತಿಯ ಮೇರೆಗೆ ಸೊರಬ ವಲಯ ಅರಣ್ಯಾಧಿಕಾರಿಗಳು ಉಳವಿ ಗ್ರಾಮದ ಎರಡು ಮನೆಗಳ ಮೇಲೆ ದಾಳಿ ನಡೆಸಿ ಕಾಡುಕೋಣದ ಮಾಂಸ ಹಾಗೂ ಇಬ್ರಾಹಿಂ ಖಾಲಿದ್ ಅಲಿಯಾಸ್ ಬಳ್ಳಾರಿ ಎಂಬವರನ್ನು ವಶಪಡಿಸಿಕೊಂಡ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ತಾಲೂಕಿನ ಉಳವಿ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡುಕೋಣವನ್ನು ಅಕ್ರಮವಾಗಿ ಬೇಟೆಯಾಡಿ ಅದರ ಮಾಂಸವನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಹಿತಿಯ ಮೇರೆಗೆ ಮಂಗಳವಾರ ಉಳವಿ ಗ್ರಾಮದ ಇಬ್ರಾಹಿಂ ಎಂಬುವವರ ಮನೆಯ ಮೇಲೆ ಸೊರಬ ವಲಯ ಅರಣ್ಯಾಧಿಕಾರಿ ಜಾವಿದ್ ಭಾಷಾ ಅಂಗಡಿ ರವರ ನೇತೃತ್ವದಲ್ಲಿ ದಾಳಿ ನಡೆಸಲು ಮುಂದಾದಾಗ ಮನೆಯ ಬಾಗಿಲು ತೆರೆಯದೆ ಗಂಟೆಗಟ್ಟಲೆ ಸತಾಯಿಸಿದ ಇಬ್ರಾಹಿಂ ಪೊಲೀಸ್ ಬಂದ ಬಳಿಕ ಬಾಗಿಲು ತೆರೆದಾಗ ಮನೆಯಲ್ಲಿ 6.5 ಕೆಜಿ ಕಾಡುಕೋಣ ಮಾಂಸ ಪತ್ತೆಯಾಗಿದೆ ಇಬ್ರಾಹಿಂ ಖಾಲಿದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದೇ ಗ್ರಾಮದ ತಸ್ವಿರ್ ಆಹ್ಮದ್ ಮನೆಯಲ್ಲಿ ಶೋಧ ನಡೆಸಿದಾಗ 16.5 ಕೆಜಿ ಮಾಂಸ ಸಿಕ್ಕಿದೆ ಆರೋಪಿ ತಸ್ವಿರ್ ಅಹ್ಮದ್ ಪರಾರಿಯಾಗಿದ್ದು ಪ್ರಕರಣಕ್ಕೆ ಸಂಬoದಿಸಿದ ನವೀದ್,ಫಾರೂಕ್ ಎಂಬುವವರು ತಲೆಮರೆಸಿಕೊಂಡಿದ್ದಾರೆ ಸೊರಬ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಅರಣ್ಯ ಅಧಿಕಾರಿಗಳು ತಲೆ ಮರೆಸಿಕೊಂಡ ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ ಸಾಗರದ ಡಿಸಿಫ್ ಸಂತೋಷ ಕೆಂಚಪ್ಪನವರ ಹಾಗೂ ಸೊರಬ ಎಸಿಎಫ್ ಯೋಗೀಶ್ ಮಾರ್ಗದರ್ಶನದಲ್ಲಿ ಉಪ ವಲಯ ಆರಣ್ಯಾಧಿಕಾರಿಗಳದ ಮುತ್ತಣ್ಣ, ರಾಮಪ್ಪ,ಮೋಹನ್,ಯೋಗರಾಜ್, ಪರಶುರಾಮ್,ಶರಣಪ್ಪ ಹಾಗೂ ಆರಣ್ಯ ರಕ್ಷಕರಾದ ಮಂಜು,ಆನಂದ್,ಹರಿ,ದೇವರಾಜ್,ಕಸ್ತೂರಮ್ಮ, ಅಶೋಕ್ ದಾಳಿಯಲ್ಲಿ ಪಾಲ್ಗೊoಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.