ಸೊರಬ:ಪಟ್ಟಣದ ರಂಗಮಂದಿರ ಆವರಣದಲ್ಲಿ ತಾಲೂಕು ಆಡಳಿತ,ತಾಲೂಕು ಪಂಚಾಯತಿ, ಪುರಸಭೆ,ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಹುಸೇನ್ ಸರಕಾವಸ್ ಮಾತನಾಡಿ,ಕರ್ನಾಟಕಕ್ಕೆ ಆಗಮಿಸುವ ಅನ್ಯ ಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಸಹ ಹೆಚ್ಚು ಕನ್ನಡ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕಿದೆ ನಾವು ಕೇವಲ ನವೆಂಬರ್ ತಿಂಗಳ ಕನ್ನಡಿಗರಾಗದೇ,ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲಿ ಮಾತನಾಡುವುದು,ಬರೆಯುವುದು, ವ್ಯವಹರಿಸುವುದನ್ನು ಮಾಡಬೇಕು ಕನ್ನಡ ನುಡಿ, ಸಂಸ್ಕೃತಿ,ಪರಂಪರೆಯನ್ನು ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂಬ ದೃಢ ನಿರ್ಧಾರ ಮಾಡಬೇಕು ಕರ್ನಾಟಕದಂತಹ ಸುಂದರ ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದರು.
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ರಂಗಮಂದಿರದವರೆಗೆ ವಿವಿಧ ಶಾಲಾ ವಿದ್ಯಾರ್ಥಿಗಳ ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು. ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 52 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್ ಮಧುರಾಯ ಶೇಟ್, ಈರೇಶ್ ಮೇಸ್ತ್ರಿ,ನಟರಾಜ್, ಪ್ರೇಮಾ ಟೋಕಪ್ಪ,ಸುಲ್ತಾನ ಬೇಗಂ,ಆಫ್ರಿನ್ ಬಾನು,ಜಯಲಕ್ಷ್ಮಿ,ಇಒ ಪ್ರದೀಪ್ ಕುಮಾರ್,ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಬಿಇಒ ಸತ್ಯನಾರಾಯಣ,ಸಬ್ ಇನ್ಸ್ಪೆಕ್ಟರ್ ನಾಗರಾಜ್,ನೌಕರರ ಸಂಘದ ಅಧ್ಯಕ್ಷ ಮಂಜುನಾಥ್,ಕನ್ನಡಪರ ಸಂಘಟನೆಗಳ ಶಿವಾನಂದ ಪಾಣಿ,ಬಲೀoದ್ರಪ್ಪ,ಶಂಕರ್ ಶೇಟ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು,ಶಾಲಾ ವಿದ್ಯಾರ್ಥಿಗಳು ಮತ್ತಿತರರಿದ್ದರು.
ವರದಿ-ಸಂದೀಪ ಯು.ಎಲ್.,ಕರುನಾಡ ಕಂದ ನ್ಯೂಸ್,ಸೊರಬ