ಬೀದರ್:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ,ಜಿಲ್ಲಾ ವಕೀಲರ ಸಂಘ,ಬೀದರ ಮತ್ತು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಬೀದರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ‘ಜಾಗೃತಿ ಅರಿವು ಸಪ್ತಾಹ’ 2023,ಅಕ್ಟೋಬರ 30ರಿಂದ 5ನೇ ನವೆಂಬರ ವರೆಗೆ ಅಂಗವಾಗಿ ‘ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ’ ವನ್ನು ದಿನಾಂಕ:02-11-2023ರಂದು ಬೆಳಿಗ್ಗೆ 10.00ಗಂಟೆಯಿಂದ ಮಧ್ಯಾಹ್ನ 1.00ಗಂಟೆಯವರೆಗೆ ಬೀದರ ತಾಲೂಕಿನ ಮರಕಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮರಕಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಯುತ ಎಸ್. ಕೆ.ಕನಕಟ್ಟೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಇವರು ಆಗಮಿಸಿದರು ಮುಖ್ಯ ಅತಿಥಿಗಳಾಗಿ ಶ್ರೀಯುತ ಎನ್.ಎಮ್ ಓಲೇಕಾರ ಪೊಲೀಸ ಉಪ ಅಧೀಕ್ಷರು,ಕರ್ನಾಟಕ ಲೋಕಾಯುಕ್ತ ಬೀದರ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಕಲ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಈಶ್ವರಮ್ಮಾ ಬಸವರಾಜ ಓಂಕಾರೆ ಇವರು ವಹಿಸಿಕೊಂಡಿದ್ದರು. ಅಥಿತಿಗಳಾಗಿ ಶ್ರೀಯುತ ಜಗನಾಥ ಮೂರ್ತಿ ಯೋಜನಾ ನಿರ್ದೇಶಕರು,ಡಿ.ಆರ್.ಡಿ.ಎ. ಇವರು ಆಗಮಿಸಿದರು ಉಪನ್ಯಾಸಕರಾಗಿ ಶ್ರೀಯುತ ಬಸವರಾಜ ಬುಳ್ಳಾ ವಕೀಲರು ಬೀದರ ಇವರು ಮತ್ತು ಶ್ರೀಯುತ ಕಿರಣ ಪಾಟೀಲ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಬೀದರ ಇವರು ಆಗಮಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಮೇಶ ಕಲ್ಯಾಣರಾವ ಜಾಬಾ ಪಂಚಾಯತ ಅಭಿವೃದ್ದಿ ಅಧಿಕಾರಿ,ಗ್ರಾಮ ಪಂಚಾಯತ ಮರಕಲ್ ಇವರು ನೆರವೆರಿಸಿಕೊಟ್ಟರು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಎಸ್.ಕೆ.ಕನಕಟ್ಟೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಇವರು ಉದ್ಘಾಟಿಸಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಾರ್ವಜನಿಕರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀಯುತ ಎನ್.ಎಮ್ ಓಲೇಕಾರ ಪೊಲೀಸ ಉಪ ಅಧೀಕ್ಷರು, ಕರ್ನಾಟಕ ಲೋಕಾಯುಕ್ತ ಬೀದರ ಇವರು ಮಾತನಾಡಿ ಸಾರ್ವಜನಿಕರ ಸೇವೆಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಕಂಡು ಬಂದ ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದಲ್ಲಿ ಅಂತಹ ಭ್ರಷ್ಟ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಾರ್ವಜನಿಕರ ಗಮನಕ್ಕೆ ತಂದರು.
ಲೋಕಾಯುಕ್ತ ಸಿ.ಪಿ.ಐ. ಆದ ಶ್ರೀಯುತ ಪ್ರದೀಪ ರವರು ಮಾತನಾಡಿ ಬಹುತೇಕ ಸಾರ್ವಜನಿಕರಿಗೆ ಲೋಕಾಯುಕ್ತ ಪೊಲೀಸ್ ಠಾಣೆ ಎಲ್ಲಿದೆ ಎಂಬುದೆ ಗೊತ್ತಿಲ್ಲ ಲೋಕಾಯುಕ್ತ ಕಚೇರಿ ಬೀದರ ನಗರದ ಬಾಲ ಭವನದ ಹತ್ತಿರ ಇದೆ ಎಂದು ಮಾಹಿತಿ ನೀಡಿದರು ಹಾಗೂ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಹಣದ ಬೇಡಿಕೆಯ ಆಮಿಷದ ಪ್ರಕಣರಗಳು ಕಂಡು ಬಂದಲ್ಲಿ ಮೊಬೈಲ್ ರೆಕಾರ್ಡ ಮಾಡಿ ನಮ್ಮ ಕಚೇರಿಗೆ ದೂರು ಸಲ್ಲಿಸಬೇಕೆಂದು ತಿಳಿಸಿದರು.
ಬೀದರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಕಿರಣ ಪಾಟೀಲ್ ರವರು ಮಾತನಾಡಿ,ಗ್ರಾಮೀಣ ಭಾಗದ ಎಲ್ಲಾ ಸಾರ್ವಜನಿಕರು ಕಾನೂನು ಪ್ರಕಾರ ಸಿಗುವ ಸವಲತ್ತುಗಳ ಬಗ್ಗೆ ತಿಳಿದುಕೊಂಡಾಗ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಜರುಗುತ್ತವೆಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿರುವ ಶ್ರೀಯುತ ಬಸವರಾಜ್ ಬುಳ್ಳಾ ವಕೀಲರು ಬೀದರ ಇವರು ಮಾತನಾಡುತ್ತ ಜವಾಬ್ದಾರಿಯುತ ನಾಗರಿಕರಾಗಬೇಕಾದರೆ,ನಮಗೆ ಕಾನೂನಲ್ಲಿ ಪಾರಣಿತ್ಯ ಪಡೆಯುವ ಅವಶ್ಯಕತೆಇರುವುದಿಲ್ಲ ಕಾನೂನಿನ ಕನಿಷ್ಟ ಸಾಮಾನ್ಯ ಜ್ಞಾನ ಇದ್ದರೆ ಸಾಕು ನಮ್ಮ ಹಕ್ಕು ಜವಾಬ್ದಾರಿಗಳ ಸಾಮಾನ್ಯ ಜ್ಞಾನವಿದ್ದರೆ ಸಾಕು ಎಂದು ತಿಳಿಸಿದರು.
ದೇವಿದಾಸ ಚಿಮಕೋಡೆ ಮತ್ತು ಅವರ ತಂಡದ ವತಿಯಿಂದ ಜಾನಪದ ಶೈಲಿಯಲ್ಲಿ ಜನರಿಗೆ ತಿಳಿಯುವ ಹಾಗೆ ನಾಟಕದ ಮೂಲಕ ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು/ಸರ್ವಸದಸ್ಯರು ಸಿಬ್ಬಂದಿಗಳು ಪ್ರೌಢ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಗ್ರಾಮದ ಮುಖಂಡರು ಹಿರಿಯರು/ಯುವಕ ಯುವತಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.