ಚಾಮರಾಜನಗರದ ಜಿಲ್ಲೆಯ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದ ಮೈದಾನದಲ್ಲಿ
ಟ್ರ್ಯಾಕ್ ನಲ್ಲಿ ಬಿದ್ದಿರುವ ಕಲ್ಲು,ಪ್ಲಾಸ್ಟಿಕ್ ಬಾಟಲ್ ಗಳು ಅಲ್ಲಲ್ಲಿ ಬಿದ್ದಿರುವ ಗುಂಡಿಗಳು ಇದನ್ನ ಕೆರೆ ಅಂಗಳ ಅಂತ ಕರಿ ಬೇಕಾ ಇಲ್ಲಾ ಕ್ರೀಡಾಂಗಣ ಅಂತ ಹೇಳ್ಬೇಕಱ್ ಎಂದು ಪ್ರಶ್ನೆ ಮಾಡುತ್ತಿರುವ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ ಹರೀಶ್ ಹೌದು ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಗಡಿನಾಡು ಚಾಮರಾಜನಗರದಲ್ಲಿ,ನಗರದ ಅಂಬೇಡ್ಕರ್ ಕ್ರೀಡಾಂಗಣದ ದುಃಸ್ಥಿತಿ ಇದು 22ಕೋಟಿ ವೆಚ್ಚದ ಜಿಲ್ಲಾ ಕ್ರೀಡಾಂಗಣ ಈಗ ಅವ್ಯವಸ್ಥೆಗಳ ಆಗರವಾಗಿದೆ ದಿನ ನಿತ್ಯ ಕ್ರೀಡಾಪಟುಗಳು ಒಂದಲ್ಲಾ ಒಂದು ಸಮಸ್ಯೆ ಎದುರಿಸುವಂತಾಗಿದೆ. ಟ್ರ್ಯಾಕ್ ನಲ್ಲಿ ಬಿದ್ದಿರುವ ಕಲ್ಲು,ಪ್ಲಾಸ್ಟಿಕ್ ಬಾಟಲ್ ಗಳು,ಅಲ್ಲಲ್ಲಿ ಬಿದ್ದಿರುವ ಗುಂಡಿಗಳು,ಗಡಿನಾಡು ಚಾಮರಾಜನಗರದಲ್ಲಿ,ನಗರದ ಅಂಬೇಡ್ಕರ್ ಕ್ರೀಡಾಂಗಣದ ದುಃಸ್ಥಿತಿ ಇದು ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಚಾಮರಾಜನಗರ.22 ಕೋಟಿ ಬಜೆಟ್ ಈ ಕ್ರೀಡಾಂಗಣದ್ದು ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ರು ಸೂಕ್ತ ಕ್ರೀಡಾಂಗಣ ನಿರ್ಮಾಣ ಆಗಿಲ್ಲ. ಸಿಂಥಟಿಕ್ ಟ್ರ್ಯಾಕ್ ಇಲ್ಲದೆ ಸ್ವಿಮ್ಮಿಂಗ್ ಪೂಲ್ ಸರಿಯಾಗಿ ನಿರ್ಮಿಸದೆ,ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿ ಮಾಡಲಾಗಿದೆ.ಈ ಕುರಿತು ಕ್ರೀಡಾಪಟುಗಳು ಎಷ್ಟೇ ಕಂಪ್ಲೆಂಟ್ ಮಾಡಿದ್ರು ಜಿಲ್ಲಾಡಳಿತ ಕ್ಯಾರೆ ಅನ್ನದೆ ಇರುವುದು ನಿಜಕ್ಕೂ ದುರಂತ.ವಿಚಿತ್ರ ಅಂದ್ರೆ ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕ್ರೀಡೆಗಳು ನಡೆಯದೆ ಬರಿ ರಾಜಕೀಯ ಸಮಾವೇಶಗಳು, ಸರ್ಕಾರಿ ಕಾರ್ಯಕ್ರಮಗಳು,ಎಕ್ಸಿಬಿಷನ್ ಗಳು ನಡೆದಿದ್ದೆ ಹೆಚ್ಚು ಜಿಲ್ಲಾಡಳಿತ ಇದನ್ನ ಕ್ರೀಡಾಂಗಣ ಎಂದು ಪರಿಗಣನೆಗೆ ತೆಗೆದುಕೊಳ್ಳದೆ ಸಮಾವೇಶ ನಡೆಸೊ ಸಭಾಂಗಣದಂತೆ ಬಳಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ 2002 ರಲ್ಲಿ ಸಿಂಥಟಿಕ್ ಟ್ರ್ಯಾಕ್ ನಿರ್ಮಾಣ ಕಾರ್ಯ ಆರಂಭವಾಗಿ 2005ರಲ್ಲಿ ಪೂರ್ಣ ಗೊಳ್ಳಬೇಕಿತ್ತು. ಆದ್ರೆ ಇನ್ನೂ ಟ್ರ್ಯಾಕ್ ನಿರ್ಮಾಣ ಮಾಡದೆ ಇರುವುದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.ಒಟ್ಟಾರೆ ಕ್ರೀಡಾಪಟುಗಳು ಸರಿಯಾದ ಪ್ರಾಕ್ಟೀಸ್ ಮಾಡಲಾಗದೆ ಪರಿತಪ್ಪಿಸುತ್ತಿದ್ದು ಬೇರೆಡೆ ಹೋಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆ ಆದಷ್ಟು ಬೇಗ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿ ಕೊಡಲೆಂಬುದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ ಹರೀಶ್.ಕೆ.ರವರ ಆಶಯ.
ವರದಿ ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.