ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಂಕಷ್ಟಕ್ಕೆ ಸ್ಪಂಧಿಸುವವರು ಯಾರು ಶಿವ?

ರೈತ ಕಷ್ಟ ಪಟ್ಟು ಸಾಲ ಸೂಲ ಮಾಡಿ, ಬಿತ್ತನೆ ಮಾಡಿದರೂ, ಹಾಕಿದ ಬಂಡವಾಳವು ಬರದೆ ಕಂಗಲಾಗಿದ್ದಾರೆ‌. ಇತ್ಙ ತನ್ನೆ ಇಲ್ಲದೆ ಬೆಳೆ ಬಂದರು, ಬಂದ ಬೆಳೆಯನ್ನು ಕೊಯಿಲು ಮಾಡಿ, ದನಗಳಿಗೆ ಸಂಗ್ರಹ ಮಾಡಿ ಇಡಲು, ಕೈಯಲ್ಲಿ ಕಾಸು ಇಲ್ಲದಂತೆ ಆಗಿದೆ.ಇತ್ತ ತಲೆ ಮೇಲೆ ಕೈ ಹೊತ್ತು, , ರೈತ ಯೋಚಿಸುತ್ತಾ ಕುಳಿತರೆ, ಆ ರೈತನಿಗೆ ಒಳ್ಳೆಯುವ ಒಂದೇ ಉಪಾಯವೆಂದರೆ ಉದ್ಯೋಗಖಾತ್ರಿಯಿಂದ ಮೇವು ಸಂಗ್ರಹಿಸಿ, ಕೊಯಿಲು ಮಾಡಲು, ನರೇಗಾದ ಕ್ರಿಯಾಯೋಜನೆಯಲ್ಲಿ ಸೇರಿಸಿದರೆ, ಅವರಿಗೆ ಒಂದು ಹ್ಯಾಟ್ಸ್ ಆಫ್ ಹೇಳಿ ಬಿಡೋಣ ಅಂತ. ನೀವು ಏನಂತೀರ? ಇವರ ಕಷ್ಟಗಳಿಗೆ ಸ್ಪಂಧಿಸಿ, ಮೇವು ಕೊಯಿಲು ಮಾಡಿ, ಸಂಗ್ರಹ ಮಾಡಿ ಕೊಡಬೇಕೆಂಬುದೇ ನಮ್ಮ “ಕರುನಾಡ ಕಂದ ” ನ್ಯೂಸ್ ಚಾನೆಲ್ ಆಶಯ.

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಹ್ಯಾಳ್ಯಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ, ಮಳೆ ಇಲ್ಲದೆ ಬರಗಾಲ ಆಗಿದ್ದು, ಜನರಿಗೆ ಅನೇಕ ತೊಂದರೆಗಳಾಗಿವೆ. ಇದರಿಂದ ಗುಳೇ ಹೋಗುವುದು ತಪ್ಪಿಸಬೇಕೆಂದು ಸರ್ಕಾರ ಮಾಡಿರುವ ನರೇಗಾ,ಕೂಲಿ ಕೆಲಸ ನೀಡಬೇಕು ನರೇಗಾ ಕೂಲಿ ಮಾನವ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಬೇಕು.
ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಕೆಲಸ ನಡೆಯುತ್ತಿದ್ದು ನಮ್ಮ ಹ್ಯಾಳ್ಯಾ ಗ್ರಾಮ ಪಂಚಾಯತಿಯಲ್ಲಿ ಕೆಲಸ ನೀಡಿರುವುದಿಲ್ಲ ಇದರ
ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಎನ್.ಭರಮಣ್ಣನವರು,ರಾಜ್ಯದಲ್ಲಿ ಬರಗಾಲ ಬಂದು ಜನರು ದನ ಕರುಗಳಿಗೆ ಮೇವು ಸಹ ಕಲೆ ಹಾಕದಿರುವ ಪರಿಸ್ಥಿತಿಯಾಗಿದೆ ನರೇಗಾ ಸಹಾಯದಿಂದ ಮೇವು ಸಂಗ್ರಹಣೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಾಡಬೇಕು ಎಂದು ಭರಮಣ್ಣ ಮತ್ತು ತಾಲೂಕು ಅಧ್ಯಕ್ಷರಾದ ಶ್ರೀಧರ ಎಸ್ ಒಡೆಯರ್ ಸರಕಾರವನ್ನು ಒತ್ತಾಯಿಸಿದರು.
ಕೆ ರಾಮಪ್ಪನವರು ಮಾತನಾಡಿ ಮಂತ್ರಿಗಳು ಕೆಂಪು ಕೋಟೆಯಿಂದ ತಮ್ಮ ಮನೆಯವರೆಗೂ ಒಳ್ಳೆಯ ಡಾಂಬರೀಕರಣವನ್ನು ಮಾಡಿಸಿರುತ್ತಾರೆ ಆದರೆ ರೈತರು ತಮ್ಮ ಹೊಲಗಳಿಗೆ ಮಳೆಗಾಲದಲ್ಲಿ ಸಂಚಾರ ಮಾಡಲು ಹೊಲಕ್ಕೆ ಹೋಗುವ ದಾರಿ, ತಮ್ಮ ಪ್ರಾಣವನ್ನೂ ಕೈ ಹಿಡಿತದಲ್ಲಿ ಇಟ್ಟುಕೊಂಡು ಹೋಗಬೇಕು ಈ ಒಂದು ವ್ಯತ್ಯಾಸ ಏಕೆ ಎಂದು ಸರಕಾರವನ್ನು ಪ್ರಶ್ನಿಸಿದರು.
ಹ್ಯಾಳ್ಯಾದಿಂದ ಸಂಗಮೇಶ್ವರ ಹಾಗೂ ಹ್ಯಾಳ್ಯಾದಿಂದ ಗಜಾಪುರ ಗ್ರಾಮಕ್ಕೆ ಹೋಗುವ ದಾರಿ ಸರಿಪಡಿಸಬೇಕು ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದವರು ಮಾಧ್ಯಮಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲುಕಿನ ಹೆಚ್.ಶೇಖರಪ್ಪ ಉಪಾಧ್ಯಕ್ಷರು,ಡಿ ವೆಂಕಟೇಶ್,ಎಸ್ ಕೊಟ್ರಯ್ಯ, ಎಂ ಶಿವಕುಮಾರ್,ಟಿ ಪ್ರಕಾಶ್,ಕೆ ರಾಮಪ್ಪ,ಎನ್ ರಾಮಪ್ಪ ಇವರುಗಳು ತಹಶೀಲ್ದಾರರಿಗೂ, ಜಿಲ್ಲಾಧಿಕಾರಿಗಳಿಗೂ ಹಾಗೂ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇವರುಗಳಿಗೆ ನಮ್ಮ ಸುದ್ದಿ ವಾಹಿನಿ ಮೂಲಕ ಮನವಿ ಮಾಡಿಕೊಂಡರು.ಈ ಎಲ್ಲಾ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ ತಮ್ಮ ಕಚೇರಿಗಳ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ