ಯಾದಗಿರಿ:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ್ ಗ್ರಾಮದ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಪ್ರಸಾದ್ ಮದ್ಲಾಪುರ್ ತೋಟಕ್ಕೆ ಹೋಗುವ ರಸ್ತೆಯ ಮಾರ್ಗ ಮಧ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಜಾಂಭವ ಯುವ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಹಣಮಂತ.ಎಮ್.ಬಿಲ್ಲವ್ ಅವರ ನೇತೃತ್ವದಲ್ಲಿ ಇಂದು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಹಣಮಂತ.ಎಮ್.ಬಿಲ್ಲವ್ ಮಾತನಾಡುತ್ತಾ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಪ್ರಸಾದ ಮದ್ಲಾಪುರ ಅವರನ್ನು ಹಾಡುಹಗಲಲ್ಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದಂತ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆವಿಧಿಸಬೇಕು ಮೃತ ದುರ್ದೈವಿ ಪ್ರಸಾದ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು 25 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಲಿತರ ಪರ ಇರುವಂತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾಡುಹಗಲಲ್ಲೇ ದಲಿತರ ಮೇಲೆ ಮಾರಣಾಂತಿಕ ಹಲ್ಲೆ,ಅತ್ಯಾಚಾರ,ಕೊಲೆ,ಸುಲಿಗೆ ನಡಿತಾ ಇದ್ರೂನು ಕೂಡಾ ಗೃಹ ಇಲಾಖೆ ಏನು ಮಾಡ್ತಾ ಇದೆ ಎಂಬುವುದು ತಿಳಿಯುತ್ತಿಲ್ಲ ದಲಿತ ಸಮಾಜದ ಮುಖಂಡನ ಕೊಲೆಗೆ ರಾಯಚೂರು ಪೋಲಿಸ್ ಇಲಾಖೆಯ ಕಾರ್ಯ ವೈಫಲ್ಯತೆಯಿಂದಾನೆ ಇವತ್ತು ಸಾಮಾಜಿಕ ಹೋರಾಟಗಾರ ದಲಿತ ಮುಖಂಡನ ಹತ್ಯೆ ಆಗಿದೆ.
ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಗೃಹ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಂಭವ ಯುವ ಸೇನೆಯ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಅಯ್ಯಪ್ಪ.ಟಿ. ಬಿಲ್ಲವ್ ಮುಖಂಡರಾದ ಸಂತೋಷ ಮ್ಯಾತ್ರಿ, ದೇವೆಂದ್ರಪ್ಪ ಶಾಂತಗಿರಿ,ಯಲಪ್ಪ ಅರಗ,ಸುರಪುರ ತಾಲೂಕು ಅಧ್ಯಕ್ಷ ಮರೆಪ್ಪ.ಎಮ್.ಗೋಗಿಕೇರಿ, ಭೀಮಣ್ಣ ಖಂಡ್ರೆ,ಕೃಷ್ಣಾ ಕಡಿಮನೆ,ಪರಮಣ್ಣ ದೊಡ್ಡಮನಿ,ಕಿರಣ್ ಇತರರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.