ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ
ಹಲ್ಬರ್ಗದ ಅನುಗ್ರಹ ಶಾಲೆಯಲ್ಲಿ 2023 -24 ನೇ ಸಾಲಿನ ಪೋಷಕ ಶಿಕ್ಷಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಶ್ರೀ ಎಂ.ಡಿ ಮಜಹರ್ ಹುಸೇನ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಲ್ಕಿರವರು ಅಲಂಕರಿಸಿದರು ಅಧ್ಯಕ್ಷ ಸ್ಥಾನವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ಪ್ರಸನ್ನ ಕುಮಾರ್ ಅವರು ವಹಿಸಿಕೊಂಡಿದ್ದರು ಪೋಷಕರ ಪ್ರತಿನಿಧಿಯಾಗಿ ಶ್ರೀ ಉಮಾಕಾಂತ್ ಜಾಂತಿರವರು, ಶ್ರೀಮತಿ ಭಾಗ್ಯಲಕ್ಷ್ಮಿ ಮೂಲ್ಗೆರವರು ಹಾಗೂ ಫಾದರ್ ಸತೀಶ್ ಕುಮಾರ್,ಫಾದರ್ ಲಾರೆನ್ಸ್ ಉಪಸ್ಥಿತರಿದ್ದರು ಮನೆಯೇ ಮೊದಲ ಪಾಠಶಾಲೆ ಜನನೀಯೇ ಮೊದಲ ಗುರು,ಪೋಷಕ ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಶಿಕ್ಷಣದ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಅತಿ ಮುಖ್ಯವಾದದ್ದು ಮಕ್ಕಳ ಅಭಿವೃದ್ಧಿಯಲ್ಲಿ ಶಿಕ್ಷಕರು ಹಾಗೂ ಪೋಷಕರು ಅತಿ ಪರಿಶ್ರಮದಿಂದ ಹಾಗೂ ಕಾಳಜಿಯಿಂದ ಅವರಿಗೆ ಮಾರ್ಗದರ್ಶನ ಮಾಡಬೇಕು ದೇಶದ ಅಭಿವೃದ್ಧಿಯಲ್ಲಿ ಆ ಮಕ್ಕಳ ಪಾತ್ರವೂ ಅತಿ ಅವಶ್ಯಕವಾಗಿದೆ ಒಬ್ಬ ಒಳ್ಳೆಯ ಪ್ರಜೆಯನ್ನು ನಿರ್ಮಾಣ ಮಾಡುವುದರಲ್ಲಿ ಪೋಷಕರು ಶಿಕ್ಷಕರು ಒಟ್ಟಾಗಿ ಸೇರಿ ದುಡಿಯಬೇಕು. ಆಗ ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿ ಹಾಕಲು ಸಾಧ್ಯವಾಗುತ್ತದೆ ಮಕ್ಕಳದಾವರು ಕುಚೇಷ್ಟೆ ಮಾಡುವುದು ಸಹಜ ಆದರೆ ತಿದ್ದಿ ನಾವೆಲ್ಲರೂ ಬುದ್ಧಿ ಹೇಳುವುದು ಬಹು ಮುಖ್ಯವಾಗಿದೆ. ಮಕ್ಕಳಿಗೆ ಬೇರೆ ಮಕ್ಕಳೊಂದಿಗೆ ಹೊಂದಾಣಿಕೆಯನ್ನು ಯಾವ ಪೋಷಕರು ಮಾಡಬಾರದೆಂದು ಕಿವಿಮಾತು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯರದ ಫಾದರ್ ಪ್ರಸನ್ನ ಕುಮಾರ್ ಅವರು ಮಾತನಾಡಿ ಮಕ್ಕಳ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ ಇನ್ನು ಯಾವುದೇ ನೀವು ಸಲಹೆ ಸೂಚನೆಗಳನ್ನು ನೀಡಿದರು ನಾವು ಅದನ್ನು ಪಾಲಿಸಲು ಸದಾ ಸಿದ್ದರಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದ ನಿರೂಪಣೆಯನ್ನು ಸರ್ ಮಂಜುನಾಥ್ ರವರು ಸ್ವಾಗತವನ್ನು ಮಿಸ್.ಶಿವಕುಮಾರಿ ರವರು ಮಾಡಿದರು.
ವರದಿ-ಮಹಾನ್ ಕೋಟೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.