ಜೇವರ್ಗಿ:ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸರ್ವ ಜನಾಂಗದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮಿ ಜಾತ್ರೆಯು ಬರದ ಛಾಯೆಯ ಮಧ್ಯೆ ಕರ್ನಾಟಕ,ಮಹಾರಾಷ್ಟ್ರ ಮತ್ತು ತಾಲೂಕಿನ ಸರ್ವಭಕ್ತರು ಹಲಗೆ ಭಾಜಾಭಜಂತ್ರಿ ಡೂಳ್ಳು ಡಿಜೆ ನಾದಕ್ಕೆ ಸಹಸ್ರಾರು ಭಕ್ತರು ಹೆಜ್ಜೆ ಹಾಕಿದರು ಭಕ್ತರು ಕಾಣಿಕೆ ಕೊಬ್ಬರಿ ಬಾಳೆಹಣ್ಣು ಕೋಳಿ ಭಂಡಾರಿ ದೇವತೆಯ ಮೇಲೆ ಹಾರಿಸಿದರು.
ತಾಲೂಕಿನ ಗಣ್ಯರು ಕಲಾವಿದರು ಅನೇಕ ಸಂಘಟನೆಗಳು ಭಕ್ತರಿಗೆ ಅನ್ನದಾನ ನೀರು ಪಾಯಸ ಹಂಚಿದರು ಒಂದು ವಾರದಿಂದ ಪ್ರತಿದಿನ ಪೂಜೆ ಹವನ ಚಿಕ್ಕಜೇವರಗಿಯಿಂದ ಮಂಟಪ ದಲಿತರು ಮರಕಡಿದರು ಬಡಿಗೇರ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಂತರ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ಕರೆ ತಂದು ನಂತರ ಬಲು ವಿಜ್ರಂಭಣೆಯಿಂದ ಮೆರವಣಿಗೆಯ ಮುಖಾಂತರ ದೇವತೆಯ ಮೂಲ ಸ್ಥಳಕ್ಕೆ ಭಕ್ತಾದಿಗಳು ರಥವನ್ನು ಎಳೆದುಕೊಂಡು ಹೋಗುವ ವಾಡಿಕೆ.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.