ಕಲಬುರಗಿ:ರಾಯಚೂರು ಜಿಲ್ಲೆಯ ದಲಿತ ಮುಖಂಡ ಪ್ರಸಾದ್ ಅವರನ್ನು ಭೀಕರವಾಗಿ ಕೊಲೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಕಟ್ಟಿಮನಿ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ದೇಶ ಮತ್ತು ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ರಾಜ್ಯ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿವೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.ಅ.30 ರಂದು ಮಾನ್ವಿ ತಾಲೂಕಿನ ಮದ್ಲಾಪೂರು ಗ್ರಾಮದ ದಲಿತ ಮುಖಂಡ ಪ್ರಸಾದ್ ಅವರನ್ನು ಸುತ್ತುವರೆದು ಮಾರಕಾಸ್ತ್ರಗಳಿಂದ ಕೈಗಳನ್ನು ತುಂಡು ಮಾಡಿ ಕುತ್ತಿಗೆಯನ್ನು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ ಈ ಕಗ್ಗೋಲೆಯು ಮಾನ್ವಿ ತಾಲೂಕಿನ ಅಕ್ಕಿ ಮತ್ತು ಮರಳಿನ ಆಕ್ರಮ ದಂಧೆಗೆ ದಲಿತ ಸಮುದಾಯದ ಪ್ರಸಾದ್ ಅವರ ವ್ಯವಹಾರಕ್ಕೆ ಅಡ್ಡಿಯಾಗಿದ್ದಾನೆಂದು ಭಯದಿಂದ ಈತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು ಜಿಲ್ಲಾಡಳಿತವು ಮದ್ಲಾಪೂರು ಪ್ರಸಾದ್‌ನನ್ನು ಕೊಲೆಗೈದವರಿಗೆ ಕಠಿಣ ಶಿಕ್ಷೆಯಾಗುವಂತೆ, ಕೊಲೆಗಾರರ ಜೊತೆ ಪೊಲೀಸ್ ಇಲಾಖೆ ಶಾಮೀಲಾಗದಂತೆ ನಿರ್ದೇಶಿಸಬೇಕು ಪೊಲೀಸ್ ಇಲಾಖೆಗೆ ಪ್ರಸಾದ್ ಮರಣದಿಂದ ಅನಾಥವಾದ ಆತನ ಕುಟುಂಬಕ್ಕೆ ರಾಯಚೂರು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಮತ್ತು ಭೂ ಒಡೆತನ ಯೋಜನೆಯಲ್ಲಿ ೦೪ ಎಕರೆ ಭೂಮಿಯನ್ನು ಒದಗಿಸಬೇಕು ಪ್ರಸಾದ್ ಕೊಲೆ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾದ ಸುಮಿತ್ರರವರಿಗೆ ಪೊಲೀಸ್ ಇಲಾಖೆ ರಕ್ಷಣೆಯನ್ನು ಒದಗಿಸಬೇಕು ಮಾನವಿ ತಾಲೂಕಿನಲ್ಲಿ ಮಾಫಿಯ, ಗೂಂಡಾಗಿರಿಯಿಂದ ಪ್ರಕ್ಷುಬ್ದ ವಾತವರಣಕ್ಕೆ ಕಾರಣವಾದ ಅಕ್ರಮ ಮರಳು ಮತ್ತು ಅಕ್ಕಿ ದಂಧೆ ಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.