ಯಾದಗಿರಿ:ಜಿಲ್ಲಾಡಳಿತ,2022-23ನೇ ಸಾಲಿನ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಾಡ ಕಛೇರಿ ಕಟ್ಟಡ ನಿರ್ಮಾಣವನ್ನು 2023ರ ನವೆಂಬರ್ 6ರ ಸೋಮವಾರ ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪೂರ ಅವರು ಉದ್ಘಾಟಿಸುವರು.ಕಂದಾಯ ಇಲಾಖೆ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಘನ ಉಪಸ್ಥಿತಿಯಲ್ಲಿ ನೆರವೇರಲಿದೆ.ಯಾದಗಿರಿ ವಿಧಾನಸಭಾ ಶಾಸಕ ಶ್ರೀ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.ರಾಯಚೂರು ಲೋಕಸಭಾ ಸದಸ್ಯರು ಶ್ರೀ ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್ತು ಸದಸ್ಯರು ಶ್ರೀ ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್,ಶ್ರೀ ಶಶೀಲ್ ಜಿ.ನಮೋಶಿ,ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ, ದೋರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಚಂದ್ರಕಲಾ ದೊರೆ ಮುಖ್ಯ ಅತಿಥಿಗಳಾಗಿ ಆಗಮಿಸುವರು.ಬೆಂಗಳೂರು ಕಂದಾಯ ಇಲಾಖೆ ಪ್ರ.ಕಾ.ಶ್ರೀ ರಾಜೇಂದ್ರಕುಮಾರ ಕಟಾರಿಯಾ, ಬೆಂಗಳೂರು ಕಂದಾಯ ಇಲಾಖೆ ಆಯುಕ್ತರು ಶ್ರೀ ಪಿ.ಸುನೀಲ ಕುಮಾರ,ಕಲಬುರಗಿ ಪ್ರಾದೇಶಿಕ ಆಯುಕ್ತರು ಶ್ರೀ ಕೃಷ್ಣ ಭಾಜಪೇಯ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ,ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ,ಸಹಾಯಕ ಆಯುಕ್ತರು ಡಾ.ಹಂಪಣ್ಣ ಸಜ್ಜನ್,ಶಹಾಪೂರ ತಹಸೀಲ್ದಾರರು ಗ್ರೇಡ-1 ಉಮಾಕಾಂತ ಹಳ್ಳೆ, ಯಾದಗಿರಿ ಜಿಲ್ಲಾ ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕರು ಕಿರಣ ಕುಮಾರ ಹೂಗಾರ ಭಾಗವಹಿಸುವರು.
ದೋರನಹಳ್ಳಿ ಗ್ರಾಮದ ಸರ್ವ ಸದಸ್ಯರು ಮತ್ತು ಸಂಘ ಸಂಸ್ಥೆಗಳು ಹಾಗೂ ಗ್ರಾಮದ ಸಮಸ್ಥ ನಾಗರಿಕರ ವತಿಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಯಾದಗಿರಿ ಜಿಲ್ಲಾ ನಿರ್ಮಿತಿ ಕೇಂದ್ರ ವ್ಯವಸ್ಥಾಪಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.