ತುಮಕೂರಿನ ಗುರುಕುಲ ಪ್ರತಿಷ್ಠಾನ ಕೊಡ ಮಾಡುವ ಗುರುಕುಲ ನಾಡ ರತ್ನ ಪ್ರಶಸ್ತಿಗೆ ನಾಗವಾಡದ ಸಾಹಿತಿ ಪ್ರಭಾಕರ್ ಕೆಡದ ಆಯ್ಕೆಯಾಗಿದ್ದಾರೆ ಬಸವನಬಾಗೇವಾಡಿ ತಾಲೂಕಿನ ಕ ಚು ಸಾ ಪ ಅಧ್ಯಕ್ಷರಾಗಿರುವ ಇವರು ಇತ್ತೀಚಿನ ತಮ್ಮ ಉತ್ತರ ಬಾಲಕಿ ಚೂಚ್ಚಲ ಕಥಾ ಸಂಕಲನವನ್ನು ಹೊರ ತಂದಿದ್ದಾರೆ ಸಂಘಟನೆ ಸಾಹಿತ್ಯ ಸಂಗೀತ ಸಮಾಜ ಸೇವೆ ಎಲ್ಲವನ್ನು ಒಟ್ಟಿಗೆ ನಿಭಾಯಿಸುವ ಇವರಿಗೆ ಗುರುಕುಲ ನಾಡರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಬಸವನಬಾಗೇವಾಡಿಯ ಕ.ಚು.ಸಾ.ಪ,ನಂದಿ ಸಾಹಿತ್ಯ ವೇದಿಕೆ ಕರುನಾಡ ಪರಿಷತ್ ಪರಿಷತ್ ಕನ್ನಡ ಜಾನಪದ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಭಿನಂದಿಸಿವೆ ಬರುವ ನವೆಂಬರ್ 18ರಂದು ಹಂಪಿಯ ಹೇಮಕೂಟ ಶೂನ್ಯ ಸಿಂಹಾಸನ ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಆಯೋಜಿಸಿರುವ ಅಖಿಲ ಭಾರತ ಮೂರನೇ ಗುರುಕುಲ ಕಲಾ ಸಮ್ಮೇಳನದಲ್ಲಿ ಅವರಿಗೆ ನಾಡು ನುಡಿ ಸೇವೆಗಾಗಿ ಪ್ರಶಸ್ತ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವರದಿ-ಆಕಾಶ ಹೂಗಾರ,ವಿಜಯಪುರ
