ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡದ ಕೆಲಸಕ್ಕೆ ಸರ್ವರೂ ಕೈಜೋಡಿಸಬೇಕು-ಕಲ್ಯಾಣಶೆಟ್ಟಿ

ಬಸವನಬಾಗೇವಾಡಿ:ಕರ್ನಾಟಕಕ್ಕೆ ಸುದೀರ್ಘ ಇತಿಹಾಸವಿದೆ,ಸಾಂಸ್ಕೃತಿಕವಾಗಿ ವೈಜ್ಞಾನಿಕವಾಗಿ ಕರ್ನಾಟಕ ಹೆಸರಾಗಿದೆ,ಪ್ರತಿಯೊಬ್ಬರೂ ಕನ್ನಡದ ಕೆಲಸಗಳು ನಡೆದಾಗ ಪ್ರತಿಷ್ಠೆಗಳನ್ನು ಬದಿಗೊತ್ತಿ ಕೈಜೋಡಿಸಬೇಕು ಎಂದು ಹಂಗರಗಿಯ ಚೆನ್ನಬಸವ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.
ಇಲ್ಲಿನ ಅಕ್ಕ ನಾಗಮ್ಮ ಸರಕಾರಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡೋಣೂರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಾಹಿತಿ ಮಶ್ಯಾಕ್ ಗೌಂಡಿ ಉಪನ್ಯಾಸಕರಾಗಿ ಮಾತನಾಡಿ ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಶ್ರೀಮಂತ ಭಾಷೆಯಾಗಿದೆ ಇಲ್ಲಿ ಅನೇಕ ಸಂತ ಮಹಾತ್ಮರು ವಿಶ್ವಮಾನವತೆಯನ್ನು ಸಾರಿ ಹೆಸರಾಗಿದ್ದಾರೆ, ಅನೇಕ ಜನ ಸಮಾಜ ಸುಧಾರಕರು ಕವಿಗಳು ಸಾಹಿತಿಗಳು ದಾರ್ಶನಿಕರು ಕನ್ನಡದ ನೆಲದಲ್ಲಿ ಸಮಾಜ ಸುಧಾರಣೆಯನ್ನು ಮಾಡಿದ್ದಾರೆ, ಕನ್ನಡವನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನದ್ದಾಗಿದೆ ಎಂದರು.
ಹಿರಿಯರಾದ ಶಿವರುದ್ರಯ್ಯ ಹಿರೇಮಠ, ವಿಜಯಪುರ ಜಿಲ್ಲಾ ಕರವೇ ಯುವ ಅಧ್ಯಕ್ಷ ಅಶೋಕ್ ಹಾರಿವಾಳ,ಕರುನಾಡು ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಶಾಂತಾ ಚೌರಿ ಮಾತನಾಡಿದರು.ಸಿ ಎಸ್ ಚೆಟ್ಟೇರ ಅಧ್ಯಕ್ಷತೆ ವಹಿಸಿದ್ದರು ಪೂಜ್ಯರಾದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಈರಣ್ಣ ಮರ್ತೂರ,ಮಾಜಿ ಕಸಾಪ ಅಧ್ಯಕ್ಷ ಆರ್ ಅಳ್ಳಗಿ,ಸಾಹಿತಿ ಗಿರಿಜಾ ಪಾಟೀಲ,ನಂದಿ ಸಾಹಿತ್ಯ ವೇದಿಕೆ ಅಧ್ಯಕ್ಷ ಮಹಾಂತೇಶ ಸಂಗಮ,ಸಾಹಿತಿ ಶಿವಪುತ್ರ ಅಜಮನಿ,ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್ ಎಸ್ ಹೂಗಾರ,ತಾಲೂಕಾ ಕಚುಸಾಪ ಅಧ್ಯಕ್ಷ ಪ್ರಭಾಕರ್ ಖೇಡದ,ನರಸಲಗಿಯ ಎಂ ಡಿ ಎಸ್ ಪಿ ಪ.ಪೂ ಕಾಲೇಜಿನ ಪ್ರಾಚಾರ್ಯ ಎ.ಎಂ.ನರಸರಡ್ಡಿ,ತಾಲೂಕಾ ಕಜಾಪ ಅಧ್ಯಕ್ಷ ದೇವೇಂದ್ರ ಗೋನಾಳ,ಪರಿಷತ್ ಜಿಲ್ಲಾಧ್ಯಕ್ಷ ಅಸ್ಲಂ ಶೇಖ ನರಸಲಗಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ:ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಮಟ್ಟದ “ಕರುನಾಡು ರಾಜ್ಯೋತ್ಸವ ಪ್ರಶಸ್ತಿ”ಪ್ರದಾನ ಮಾಡಲಾಯಿತು. ಸಂಘಟನಾ ಕ್ಷೇತ್ರದಿಂದ ವಿಜಯಪುರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಅಧ್ಯಕ್ಷ ಅಶೋಕ ಹಾರಿವಾಳ,ಸಮಾಜ ಸೇವಾ ಕ್ಷೇತ್ರದಿಂದ ನರಸಲಗಿಯ ಸಮಾಜ ಸೇವಕ ಮಾರುತಿ ಬಾಬು ನಲವಡೆ,ಶಿಕ್ಷಣ ಕ್ಷೇತ್ರದಿಂದ ಹೂವಿನ ಹಿಪ್ಪರಗಿಯ ಕನ್ನಡ ಉಪನ್ಯಾಸಕ ಗುರುಲಿಂಗಪ್ಪ ಮಲ್ಲಪ್ಪ ಹಳ್ಳೂರ,ಸಂಗೀತ ಕ್ಷೇತ್ರದಿಂದ ಸಂಗೀತ ಶಿಕ್ಷಕ ಮಲ್ಲು ಗದ್ದಿ,ಸಮಾಜ ಸೇವಾ ಕ್ಷೇತ್ರದಿಂದ ಲಕ್ಕಣ್ಣ ಸುಭಾನಪ್ಪರ,ಸಾಹಿತ್ಯ,ಸಮಾಜ ಸೇವಾ ಕ್ಷೇತ್ರದಿಂದ ಮುಳವಾಡದ ಅರವಿಂದ ರವೀಂದ್ರನಾಥ ಬಿರಾದಾರ,ಸಾಹಿತ್ಯ ಕ್ಷೇತ್ರದಿಂದ ಉಡುಪಿಯ ಅಮೃತ ಸಂದೀಪ್ ಶೆಟ್ಟಿ,ಪತ್ರಿಕೋದ್ಯಮ ಕ್ಷೇತ್ರದಿಂದ ವಿಜಯಪುರದ ಶುಭಾ ಹತ್ತಳ್ಳಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಶೇಷ ಸನ್ಮಾನ:ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನಿಸಲಾಯಿತು. ಯೋಗಗುರು ಕಾಶೀನಾಥ ಅವಟಿ,ಸಮಾಜ ಸೇವಕ ರವಿಗೌಡ ಚಿಕ್ಕೊಂಡ,ಪತ್ರಕರ್ತರಾದ ಬಸವರಾಜ ನಂದಿಹಾಳ,ಗುರುರಾಜ್ ಕನ್ನೂರ,ನೂತನ ಕರವೇ (ಸ್ವಾ.ಬ)ಯುವ ಅಧ್ಯಕ್ಷ ಮಹಾಂತೇಶ ಚಕ್ರವರ್ತಿ, ಸಮಾಜ ಸೇವಕ ಕಾಜಂಬರ್ ನದಾಫ ರವರಿಗೆ ಸನ್ಮಾನಿಸಲಾಯಿತು.

ಪದಾಧಿಕಾರಿಗಳ ಪದಗ್ರಹಣ:ಬೋರಮ್ಮ ಪತಂಗಿ, ತಾಲೂಕಾ ಅಧ್ಯಕ್ಷರು ಕೊಲ್ಹಾರ,ಪ್ರತಿಭಾ ತೊರವಿ, ತಾಲೂಕಾ ಉಪಾಧ್ಯಕ್ಷರು ಕೊಲ್ಹಾರ ,ನೀಲಪ್ಪ ಅಂಗಡಿ,ತಾಲೂಕು ಅಧ್ಯಕ್ಷರು, ಬಸವನಬಾಗೇವಾಡಿ,ಅರ್ಚನಾ ದಂಡಾವತಿ , ಗೌರವ ಸಲಹೆಗಾರರು,ಬಸವನಬಾಗೇವಾಡಿ,ಲಕ್ಷ್ಮೀ ಕಳ್ಳಿಗುಡ್ಡ,ಮಹಿಳಾ ಉಪಾಧ್ಯಕ್ಷರು ತಾಲೂಕಾ ಘಟಕ ಬಸವನಬಾಗೇವಾಡಿ,ಸಚಿನ್ ಗಡಿಬಿಡಿ,ಪ್ರಧಾನ ಕಾರ್ಯದರ್ಶಿಗಳು,ಕೊಲ್ಹಾರ ಘಟಕ ಇವರಿಗೆ ನೇಮಕಾತಿ ಪತ್ರ ಕೊಡುವ ಮೂಲಕ ಜವಾಬ್ದಾರಿ ನೀಡಲಾಯಿತು.

ಕವಿಗೋಷ್ಠಿ:ಕವಿಗಳಾದ ಕೆ ಎಸ್ ಅವಟಿ,ಶಿವಾಜಿ ಮೋರೆ,ರುದ್ರಮ್ಮ ಅಮಲ್ಯಾಳ,ನಾಗಣ್ಣ ಚಿಗರಿ, ಗುರು ಪತ್ತಾರ,ಮಾಧುರಿ ಮಠ,ಪ್ರವೀಣ ನಂದಿ,ಪೂಜಾ ಜೋಗಿ ಕವನ ವಾಚನ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ:ರಂಗಭೂಮಿ ಕಲಾವಿದರಾದ ಶ್ರೀಕಾಂತ್ ಮೇತ್ರಿ,ಗಾಯಕ ಈಶ್ವರ ಹಳ್ಳಿ, ಸಂಗೀತ ಶಿಕ್ಷಕ ಮಲ್ಲು ಗದ್ದಿ,ಬಾಲ ಪ್ರತಿಭೆಗಳಾದ ನಾಜಮಿನ್ ವಾಲಿಕಾರ,ಅರ್ಪಿತಾ ಜೋಗಿ,ರೇಖಾ ಅಂಗಡಿ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ನರಸಲಗಿ ಎಂ ಡಿ ಎಸ್ ಪಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುರೇಖಾ ಹಾಲಿಹಾಳ,ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳ ನೃತ್ಯಗಳು ಗಮನ ಸೆಳೆದವು.

ಬಸವನಬಾಗೇವಾಡಿ ತಾಲೂಕಾ ನೂತನ ಅಧ್ಯಕ್ಷ ನೀಲಪ್ಪ ಅಂಗಡಿ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಪಾಟೀಲ ನಿರೂಪಿಸಿದರು ಜಿಲ್ಲಾ ಖಜಾಂಚಿ ಸಂಗಮೇಶ ತಾಳಿಕೋಟಿ,ಜಿಲ್ಲಾ ಸಾಂಸ್ಕೃತಿಕ ಪ್ರತಿನಿಧಿ ಬಿಸ್ಮಿಲ್ಲಾ ಪಿಂಜಾರ ಕಾರ್ಯಕ್ರಮ ನಿರ್ವಹಿಸಿದರು.
ವರದಿ-ಆಕಾಶ್ ಹೂಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ