ಅಗೋ ನೋಡು ಹಾರುತಿಹ ಹಕ್ಕಿಗಳನು
ಅಗೋ ಕೃಷ್ಣೆ,ತುಂಗಾ,ಭದ್ರಾ,ಕಾವೇರಿಯು
ಮೈತುಂಬಿ ಹರಿಯುತ್ತಿರೋ ನದಿಗಳನು
ಅಗೋ ನೋಡು ಕನ್ನಡನಾಡಿನ ಸೊಬಗನು !!
ಅಗೋ ನೋಡು ಈ ನಾಡಿನ ಕಲ್ಪವೃಕ್ಷವನು
ಅಗೋ ವನ್ಯಮೃಗಗಳ ಕನ್ನಡ ನಾಡು
ಮೈತುಂಬಿ ಕೊಂಡಿವುದು ಅಚ್ಚ ಹಸಿರ ಕಾಡನು
ಅಗೋ ನೋಡು ಕನ್ನಡನಾಡಿನ ಸೊಬಗನು !!
ಅಗೋ ಕನ್ನಡ ತಾಯಿ ಭುವನೇಶ್ವರಿಯ ನಾಡನು
ನೋಡು ವಾಸ್ತುಶಿಲ್ಪದ ತವರಿನ ತೊಟ್ಟಿಲು
ಅಗೋ ವಾಸ್ತುಶಿಲ್ಪದ ತಿರುಳ್ಗನ್ನಡ ಬೀಡನು
ಅಗೋ ನೋಡು ಕನ್ನಡನಾಡಿನ ಸೊಬಗನು !!
ಪಂಪ ರನ್ನ ಪೊನ್ನ ಜನ್ನ ನಾಗಚಂದ್ರರ ನಾಡನು
ಅಗೋ ಜ್ಞಾನಪೀಠ ಪ್ರಶಸ್ತಿ ವಿಜೇತರರು
ನೋಡು ಶಾಸ್ತ್ರೀಯ ಭಾಷೆಯ ಕನ್ನಡವನು
ಅಗೋ ತಿಳಿದುಕೋ ಕನ್ನಡನಾಡಿನ ಸೊಬಗನು !!
ನೋಡು ಹಂಪಿ,ಐಹೋಳೆ,ಪುಲಿಗೆರಿಯನು
ಮಯೂರ,ಪುಲಿಕೇಶಿಯ,ಬಸವಣ್ಣರು,
ನೋಡು ಕಲೆ,ಸಂಸ್ಕೃತಿ,ತವರ ತಿರುಳ್ಗನ್ನಡನು
ಅಗೋ ತಿಳಿದುಕೋ ಕನ್ನಡನಾಡಿನ ಸೊಬಗನು !!
ಅಗೋ ನನ್ನ ಮನ ನೆನದ್ದು ಕೌಜಗದೆಶಂ
ಅಗೋ ನಾ ಪುಟ್ಟಿರೆ ಗನ್ನಡದೆಶಂ ಪುಟ್ಟುವೆ
ನೋಡು ಚಂದದ ಕನ್ನಡ ಸೊಗಸನು
ಅಗೋ ನೋಡು ಕನ್ನಡನಾಡಿನ ಸೊಬಗನು !!
-ಬೆಹಿಮ,