ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ರೈತರ ಪಂಪ್ ಸೆಟ್ ಮೋಟಾರ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸ್ ಇಲಾಖೆ.ಮಂಗಳವಾರ ಸಂಜೆ ನಗರದ ಹೊರವಲಯದ ರುಕ್ಮಾಪುರ ಕ್ರಾಸ್ ಬಳಿ ಬೈಕ್ ಮೇಲೆ ಇಬ್ಬರು ವ್ಯಕ್ತಿಗಳು ಪಂಪಸೆಟ್ ಮೋಟಾರ್ ತೆಗೆದುಕಂಡು ಹೋಗುತ್ತಿರುವದನ್ನು ನೋಡಿದ ಪೆಟ್ರೊಲಿಂಗ್‌ನಲ್ಲಿದ್ದ ಪೊಲೀಸರು,ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ವಿವಿಧ ಕಡೆಗಳಲ್ಲಿ ಮೋಟಾರ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಸುಮಾರು 90 ಸಾವಿರ ರೂಪಾಯಿ ಮೌಲ್ಯದ 7 ಪಂಪಸೆಟ್ ಮೋಟಾರ್ ಜಪ್ತಿ ಮಾಡಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಜಾವಿದ್ ಇನಾಂದಾರ್,ಮಾರ್ಗದರ್ಶನದಲ್ಲಿ,ಪಿ.ಐ ಆನಂದ ವಾಘಮೊಡೆ,ಪಿ.ಎಸ್.ಕೃಷ್ಣಾ ಸುಬೇದಾರ್,ಹಣಮಂತ್ರಾಯ ಹಾಗೂ ಪೊಲೀಸ್ ಪೇದೆಗಳಾದ ಸಣ್ಣಕೆಪ್ಪ, ನಾಗರಾಜ,ಬಸವರಾಜ,ಹುಸೇನಿ,ಸಿದ್ರಾಮರೆಡ್ಡಿ, ಚಂದ್ರಶೇಖರ ಇವರುಗಳ ತಂಡದ ಕಾರ್ಯಕ್ಕೆ ಎಸ್ಪಿ ಸಂಗೀತಾ ಜಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್
