ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ತ್ಯಾಗದಕಟ್ಟೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 55 ಮಕ್ಕಳಿದ್ದು ಮೂವರು ಶಿಕ್ಷಕರು ಇದ್ದು ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದು ಒಬ್ಬ ಶಿಕ್ಷಕಿಯು ಜೂನ್ 23ಕ್ಕೆ ಹಾಜರಾಗಿದ್ದು ನಂತರ ಇಲ್ಲಿಯವರೆಗೂ ಶಾಲೆಗೆ ಬಂದಿರುವುದಿಲ್ಲ ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ
ಅದ್ದರಿಂದ ಅವರನ್ನು ತಕ್ಷಣ ಕೆಲಸದಿಂದ ವಜಾಗೊಳಿಸಬೇಕೆಂದು ನ್ಯಾಮತಿ ತಾಲೂಕು ಕೆಪಿಎಸ್ ಶಾಲೆಯಲ್ಲಿ ಒಬ್ಬ ಶಿಕ್ಷಕರು ಪಾಠ ಮಾಡದೆ ಹೊರಗಡೆ ತಿರುಗಾಡುತ್ತಿದ್ದಾರೆ.ಬಿ ಓ ಹಾಗೂ ಬಿ ಆರ್ ಪಿ ಹಾಗೂ ಬಿ ಆರ್ ಸಿ ಹಾಗೂ ಸಿ ಆರ್ ಪಿ ಯವರು ಶಾಲೆಗೆ ಭೇಟಿ ನೀಡಿ ಮಕ್ಕಳಿಂದ ಹೇಳಿಕೆ ಪಡೆದುಕೊಂಡು ಅಂತಹ ಶಿಕ್ಷಕರಿಗೆ ಕಠಿಣ ಕ್ರಮವನ್ನು ಜರಗಿಸಬೇಕೆಂದು ವರದಿಯನ್ನು ಕೊಟ್ಟಿರುತ್ತಾರೆ,ಡಿ ಡಿ ಪಿ ಐ ಯವರು ಅದನ್ನು ಮುಚ್ಚಿಹಾಕ್ಕಲು ಯತ್ನಿಸಿದ ಕಾರಣ ದಿನಾಂಕ 7.11. 2023 ರಂದು ದಾವಣಗೆರೆಯ ಡಿ ಡಿ ಪಿ ಐ ಕಚೇರಿಯ ಮುಂದೆ ಧರಣಿಯನ್ನು ಮಾಡಲಾಯಿತು ಧರಣಿಯಲ್ಲಿ ಜಿಲ್ಲಾಧ್ಯಕ್ಷರಾದ ಅಂಜಿನಪ್ಪ,ಜಿಲ್ಲಾ ಕಾರ್ಯದರ್ಶಿ ಲಿಂಗರಾಜ್,ರಾಜ್ಯ ಕಾರ್ಯದರ್ಶಿ ರುದ್ರ ನಾಯಕ್,ಹೊನ್ನಾಳಿ ತಾಲೂಕು ಎಸ್ ಡಿ ಎಂ ಸಿ ಅಧ್ಯಕ್ಷರಾದ ಎ ಎಸ್ ಶಿವಲಿಂಗಪ್ಪ,ಹುಣಸಘಟ್ಟ ತಾಲೂಕ ಕಾರ್ಯದರ್ಶಿ ಬನ್ನಿಕೋಡ್ ಸತೀಶ್, ನ್ಯಾಮತಿ ಅಧ್ಯಕ್ಷರಾದ ರಾಜಶೇಖರ್,ಸಂಘಟನಾ ಕಾರ್ಯದರ್ಶಿ ರಮೇಶ್ ಪೇಟೆ ಶೈಲ ಹೊನ್ನಾಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ತಾಲೂಕ್ ಕಾರ್ಯದರ್ಶಿ,ಸಂಘಟನಾ ಮಂಜುನಾಥ್ ಪ್ರಕಾಶ್,ದಯಾನಂದ್ ಮಲ್ಲಿಕಾರ್ಜುನ್,ಹರಿಹರ ಅಧ್ಯಕ್ಷರಾದ ಬಸವರಾಜ್,ಅಸ್ಮಿನಾ ಬಾನು 30ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ವರದಿ-ಪ್ರಭಾಕರ ಡಿ ಎಂ ಹೊನ್ನಾಳಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.