ಕವಿದ ಕಾರ್ಮೋಡದಿ
ಮಳೆಯು ಧರೆಗಿಳಿದು
ಹನಿಗಳನ್ನು ಪಸರಿಸುತ್ತಾ
ಗಿಡ ಮರಗಳು ತಂಪಾದವು
ಬಾಯಿ ತೆರೆದ ಭೂಮಿಗೆ
ಮರು ಜೀವ ತುಂಬಿ
ಬಾಯಾರಿದ ದನ ಕರುಗಳಿಗೆ
ಒಣಗಿ ನಿಂತ ಫೈರುಗಳಿಗೆ
ದಣಿವ ನೀ ನೀಗಿಸಿದೆ
ತಲೆ ಮೇಲೆ ಕೈ ಹಿಡಿದು
ನಿಂತ ರೈತರ ಕಂಡು
ಅವರ ಮನಸ್ಸಿನ ತಳಮಳವನ್ನು ನೋಡಿ
ನೀನಾದೆ ಆಸರೆ ಅವರ ಬಾಳಿಗೆ
ಜಗತ್ತು ಕಾಯುವುದು ನಿನಗಾಗಿ
ನೀ ಇರದೇ ಹೋದರೆ ಬದುಕು ಸಾಗದು ಜಗದಲ್ಲಿ
ಅದಕ್ಕಾಗಿ ಪೂಜಿಸುತ್ತಿವರು
ಶಿವಗಂಗೆನು ಇಲ್ಲಿ
-ಚಂದ್ರಶೇಖರಚಾರಿ ಎಂ
ಶಿಕ್ಷಕರು,ವಿಶ್ವ ಮಾನವ ಪ್ರೌಢ ಶಾಲೆ,
ಸೀಬಾರ ಗುತ್ತಿ ನಾಡು,ಚಿತ್ರದುರ್ಗ