ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸತ್ಯಾಗ್ರಹಿ:ಶ್ರೀ ಕೇದಾರ ಲಿಂಗಯ್ಯ ಹಿರೇಮಠ ರವರ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ.

ಜೇವರ್ಗಿ:ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ ಬ್ರ ಡಾ”ಗಂಗಾಧರ ಶಿವಾಚಾರ್ಯರು ಸುಕ್ಷೇತ್ರ ಅಬ್ಬೆ ತುಮಕೂರು,ಶ್ರೀ ಷ ಬ್ರ ವಿಶ್ವರಾಧ್ಯ ಶಿವಾಚಾರ್ಯರು ಸುಕ್ಷೇತ್ರ ಮಾಗಣಗೇರಿ,ಶ್ರೀ ಷ ಬ್ರ ಸಿದ್ದರಾಮ ಶಿವಚಾರ್ಯರು ಸುಕ್ಷೇತ್ರ ತಪೋವನ ಮಠ ಶಖಾಪೂರ,ಷ ಬ್ರ ಕೆಂಚ ವೃಷಬೇಂದ್ರ ಶಿವಾಚಾರ್ಯರು ಸುಕ್ಷೇತ್ರ ಸಂಸ್ಥಾನ ಮಠ ಆಲೂರು,ಷ ಬ್ರ ರುದ್ರಮುನಿ ಶಿವಾಚಾರ್ಯರು ಸುಕ್ಷೇತ್ರ ಕಡಕೋಳ ಹಾಗೂ ಇನ್ನು ಹಲವಾರು ಪೂಜ್ಯರು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು”.
ಸತ್ಯಾಗ್ರಹಿ ಶ್ರೀ ಕೇದಾರ ಲಿಂಗಯ್ಯ ಹಿರೇಮಠ ಅವರ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭದ ಗ್ರಂಥವನ್ನು ಲೋಕಾರ್ಪಣೆ ಮಾಡಿದ ಮಾನ್ಯ ಶ್ರೀ ಶರಣಬಸಪ್ಪ ದರ್ಶನಾಪುರ ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮ ಸಚಿವರ ಕರ್ನಾಟಕ ಸರ್ಕಾರ ಹಾಗೂ ಈ ಗ್ರಂಥ ಬಿಡುಗಡೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅಜಯ ಸಿಂಗ್ ಶಾಸಕರು ಹಾಗೂ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಅಭಿನಂದನಾ ಉಪಸ್ಥಿತಿ ವಹಿಸಿದ ಕೇದಾರ ಲಿಂಗಯ್ಯ ಹಿರೇಮಠ,ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮಾನ್ಯ ಶ್ರೀ ಎಸ್ ಕೆ ಕಾಂತ ಮಾಜಿ ಸಚಿವರು ಕರ್ನಾಟಕ ಸರ್ಕಾರ,ಮಾನ್ಯ ಶ್ರೀ ಎಂ ವೈ ಪಾಟೀಲ್ ಶಾಸಕರು ಅಫಜಲಪೂರ,ಮಾನ್ಯ ಶ್ರೀ ಅಲ್ಲಮಪ್ರಭು ಪಾಟೀಲ್ ಶಾಸಕರು ಕಲಬುರ್ಗಿ ಗ್ರಾಮೀಣ ಹಾಗೂ ಮಾನ್ಯ ಶ್ರೀ ತಿಪ್ಪಣ್ಣ ಕಮಕನೂರು ವಿಧಾನ ಪರಿಷತ್ ಸದಸ್ಯರು ಕಲಬುರ್ಗಿ,ಮಾನ್ಯ ಶ್ರೀ ಅಶೋಕ್ ಮನಗೂಳಿ ಶಾಸಕರು ಸಿಂದಗಿ,ಮಾನ್ಯ ಶ್ರೀ ಶಿವರಾಜ್ ಪಾಟೀಲ್ ರದ್ದೇವಾಡಗಿ ಜಿಲ್ಲಾಧ್ಯಕ್ಷರು ಬಿಜೆಪಿ,ಮಾನ್ಯ ಶ್ರೀ ಮಲ್ಲಿನಾಥಗೌಡ ಪಾಟೀಲ್ ಯಲಗೋಡ ಹಿರಿಯ ಮುಖಂಡರು ಬಿಜೆಪಿ ಜೇವರ್ಗಿ,ಮಾನ್ಯ ಶ್ರೀ ರೇವಣಸಿದ್ದಪ್ಪ ಸಂಕಾಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಅರಳಗುಂಡಗಿ,ಮಾನ್ಯ ಶ್ರೀ ಚನ್ನಮಲ್ಲಯ್ಯ ಹಿರೇಮಠ ಕ.ಸಾ.ಪ.ಗೌರವ ಅಧ್ಯಕ್ಷರು ಜೇವರ್ಗಿ,ಹಣಮಂತ್ರಾಯ ರಾಂಪೂರ,ನಿಂಗಣ್ಣ ಹರನಾಳ,ಗಫೂರ ಸಾಬ್ ಮಂದೇವಾಲ್,ಧರೀಶ್ ಗುಳಗಿ,ಬಸವರಾಜ ದಬಕಿ,ಸುರೇಶ ಪಾಟೀಕ್ ನೇದಲಗಿ ಹಾಗೂ ಮಾನ್ಯ ಶ್ರೀ ಸೋಮಶೇಖರ್ ಗೋನಾಯಕ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ಕಲಬುರ್ಗಿ,ಮಾನ್ಯ ಡಾಕ್ಟರ್ ಎಚ್ ಡಿ ಪೋತೆ ನಿರ್ದೇಶಕರು ಕನ್ನಡ ಅಧ್ಯಯನ ಸಂಸ್ಥೆ ಗುಲ್ಬರ್ಗ ವಿ ವಿ ಕಲಬುರ್ಗಿ,ಮಾನ್ಯ ಶ್ರೀ ಸದಾನಂದ ಎನ್ ಪಾಟೀಲ್ ಸತ್ಯಾಗ್ರಹಿ ಅಭಿನಂದನಾ ಗ್ರಂಥ ಸಂಪಾದಕರು ಹಾಗೂ ಸತ್ಯಾಗ್ರಹರಿ ಗ್ರಂಥ ರಚನೆಗೆ ಸಹಕರಿಸಿದ ಲೇಖಕರೆಂದರೆ ಶ್ರೀ ಮೈಪಾಲ್ ರೆಡ್ಡಿ, ಶ್ರೀ ಮಲ್ಲಿಕಾರ್ಜುನ ಕಡಕೋಳ,ಶ್ರೀ ಎ ಬಿ ಹಿರೇಮಠ,ಡಾ.ಶರಣಗೌಡ,ಅಶೋಕ ದೊಡ್ಡಮನಿ, ಶ್ರೀ ಅಮೃತ ದೊಡ್ಡಮನಿ,ಶ್ರೀ ಚಂದ್ರಕಾಂತ ಸಂಗೋಳಗಿ ಹಾಗೂ ಅಭಿನಂಧನಾ ಗ್ರಂಥದ ಆತ್ಮೀಯ ಬಂಧುಗಳು ಹೀಗೆ ಹಲವಾರು ಬರವಣಿಗೆ ವಿದ್ವಾಂಸರು ಸತ್ಯಗ್ರಹಿಯ ಗ್ರಂಥದ ರಚನೆಗೆ ಸಹಕರಿಸಿದರು.ಈ ಅಭಿನಂದನಾ ಗ್ರಂಥ ಕಾರ್ಯಕ್ರಮದ ಸಂಪಾದಕರಾದ ಸದಾನಂದ ಪಾಟೀಲ್ ರವರ ಅಂತರಾಳದ ಮಾತುಗಳು ದೃಶ್ಯಗಳು ಹೀಗಿವೆ.
ಸತ್ಯಾಗ್ರಹಿ ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರ ಅಭಿನಂದನಾ ಗ್ರಂಥದಲ್ಲಿನ ಅಂತರಾಳದ ಮಾತುಗಳನ್ನು ಹೇಳುವುದಾದರೆ 1959 ನವಂಬರ್ 28 ರಂದು ತಂದೆ ಸಂಗನಬಸಯ್ಯ ತಾಯಿ ದಾನಮ್ಮರವರ ತೃತೀಯ ಸುಪುತ್ರರಾಗಿ ಜನಿಸಿದರು.ಇವರು ಬಾಲ್ಯದ ದಿನಗಳಿಂದಲೂ ಅತ್ಯಂತ ಹೋರಾಟದ ಜೀವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಂದುವರೆಸಿಕೊಂಡು ಬಂದರು ಹೀಗೆ ಹತ್ತು ಹಲವಾರು ರೀತಿಯಾದಂತಹ ಚಿಕ್ಕ ವಯಸ್ಸಿನಿಂದಲೇ ಹಲವಾರು ರೀತಿಯ ಹೋರಾಟಗಳನ್ನು ಮಾಡುತ್ತಾ ತೊಗರಿ ಬೆಳೆ ಪರಿಹಾರ ಹಾಗೂ ಮೊದಲ ಬಾರಿಗೆ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡುತ್ತಿರುವ ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ದೃಶ್ಯಗಳು ಹಾಗೆಯೇ 2005 ಮಂಜೂರಾತಿಗಾಗಿ ಒತ್ತಾಯಿಸಿ ಜೇವರ್ಗಿ ಪಟ್ಟಣದ ಮುಖ್ಯರಸ್ತೆ ಮೇಲೆ ಉರುಳು ಸೇವೆ ಮಾಡಿ ಪ್ರತಿಭಟನೆ ಮಾಡುತ್ತಿರುವ ಸಂದರ್ಭಗಳು,ಜೇವರ್ಗಿ ತಾಲೂಕಿನ ರೈತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವುದು ಒಂದು ದೃಶ್ಯ,ಇದೇ ರೀತಿಯಾದಂತಹ ವಿಧಾನಸೌಧದಲ್ಲಿ 2002 ರಲ್ಲಿ ತೊಗರಿ ಮಂಡಳಿ ಬೋರ್ಡ್ ವಹಿಸುವಂತೆ ನಡೆದ ಹೋರಾಟದ ಬಗ್ಗೆ,ವಿಧಾನಸೌಧದ ಸಭೆ ನಡೆದ ಕ್ಷಣ ಹಾಗೆ ರೈತ ಬೇಡಿಕೆಗಳನ್ನು ಕುರಿತ ನಡೆದ ಹೋರಾಟದಲ್ಲಿ ಬಂಧನಕ್ಕೊಳಗಾದ ರೈತ ಮುಖಂಡರು,ಕಾರ್ಯಗೃಹದಿಂದ ಬಿಡುಗಡೆಯಾದ ಸಂದರ್ಭದ ದೃಶ್ಯಗಳು,2010ರಲ್ಲಿ ಸರಕಾರದಿಂದ ತೊಗರಿ ಖರೀದಿಸಬೇಕೆಂದು ಒತ್ತಾಯಿಸಿ ಅವರಣಾತ್ಮಕ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ರೈತ ಮುಖಂಡರಿಗೆ ರಾತ್ರಿ ಕಳೆದ ಕ್ಷಣಗಳು ನೋಟ ಹಾಗೂ 1993 ರಲ್ಲಿ ತೊಗರಿ ಬೆಳೆ ಪರಿಹಾರ ನೀಡುವಂತೆ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಚಿವರಾದ ಶ್ರೀ ಧರ್ಮಸಿಂಗ್ ಹಾಗೂ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತ ಸಂದರ್ಭ ಹಾಗೂ ಇದೇ ರೀತಿ ಬೆಳೆ ಪರಿಹಾರ ಮತ್ತು ಬೆಳೆ ವಿಮೆಗಾಗಿ ಬೆಂಬಲ ಭಾಗವಹಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 2018ರಲ್ಲಿ ಸರಕಾರ ತಡೆಹಿಡಿದ ಬೆಳೆ ವಿಮೆಗೆ ಬಿಡುಗಡೆ ಒತ್ತಾಯಿಸಿ ರೈತರ ಧರಣಿ ಒಂದಲ್ಲ ಎರಡಲ್ಲ ನೂರಾರು ರೈತರ ಪರ ಹೋರಾಟ ಮಾಡಿ ಈ ಹೋರಾಟದ ಫಲ ಶೃತಿಯನ್ನು ಇಡೀ ರಾಜ್ಯಾದ್ಯಂತ ಮತ್ತು ವಿಧಾನಸೌಧವನ್ನು ಗುಡುಗಿಸಿದ ಶ್ರೀ ಕೇದಾರಲಿಂಗ ಹಿರೇಮಠ ಅವರ ಒಂದು ಅದ್ಭುತವಾದ ಗ್ರಂಥದ ಲೋಕಾರ್ಪಣೆ ಸಮಾರಂಭವನ್ನು ಇಂದು ದಿನಾಂಕ: 10-11-2023 ರಂದು ಶ್ರೀ ಧರಂಸಿಂಗ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮೂಡಿಬಂದಿತು.
ನಿರೂಪಣೆಯನ್ನು ಶ್ರೀ ಎಸ್ ಕೆ ಬಿರಾದಾರ ಕ.ಸಾ.ಪ.ಅಧ್ಯಕ್ಷರು ಜೇವರ್ಗಿ ಹಾಗೂ ಸ್ವಾಗತವನ್ನು ಶ್ರೀ ವಿಜಯಕುಮಾರ ಕೆ ಹಿರೇಮಠ ಕಾಂಗ್ರೆಸ್ ಯುವ ಮುಖಂಡರು ಹಾಗೂ ಸಂಗೀತ ಸೇವೆಯನ್ನು ಶ್ರೀ ಶಿವರುದ್ರಯ್ಯ ಸ್ವಾಮಿ ಗೌಡಗಾಂವ್ ಸಂಗಡಿಗರಿಂದ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿತು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್ ಗುಡೂರ SN

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!