ಸೊರಬ:ವೀರಶೈವ ಲಿಂಗಾಯತ ಸಮಾಜ ಕೋಟಾದ ಹೆಸರಲ್ಲಿ ಟಿಕೆಟ್ ಮತ್ತು ಅಧಿಕಾರ ಅನುಭವಿಸಲಿಕ್ಕೆ ಮಾತ್ರ ವೀರಶೈವ ಲಿಂಗಾಯತ ಶಾಸಕರು,ಸಚಿವರು,ಸಂಸದರು ಮುಂದಾಗಿದ್ದಾರೆಯೇ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ ಈರೇಶ್ ಗೌಡ ಪ್ರಶ್ನಿಸಿದ್ದಾರೆ.ಸೊರಬ ಪಟ್ಟಣದಲ್ಲಿ ಕರುನಾಡ ಕಂದ ನ್ಯೂಸ್ ನೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವೈಜ್ಞಾನಿಕ ಹಳೆಯ ಕಾಂತರಾಜು ಆಯೋಗದ ಜಾತಿ ಗಣತಿಯನ್ನು ಜಾರಿಗೆ ತರಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ?ಅದರ ನ್ಯೂನತೆಗಳು ಶಾಸಕರು,ಸಂಸದರಿಗೆ ಗೊತ್ತಿದ್ದರೂ ಸುಮ್ಮನಿರುವುದು ಎಷ್ಟರ ಮಟ್ಟಿಗೆ ಸರಿ?ಎಂದು ಪ್ರಶ್ನಿಸಿದ ಅವರು ತಕ್ಷಣವೇ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ಮರು ಜಾತಿ ಗಣತಿ ಮಾಡಲು ಶಾಸಕರು,ಸಂಸದರು ಒತ್ತಾಯ ಹೇರಬೇಕು,ಎಲ್ಲವೂ ಪಾರದರ್ಶಕವಾಗಿರಬೇಕು.
ಸಮಾಜದ ಒಗ್ಗಟ್ಟಿಗೆ ಮತ್ತು ಅಸ್ತಿತ್ವಕ್ಕೆ ದಕ್ಕೆ ಬಂದಾಗ ತಾವು ನಿಂತುಕೊಳ್ಳದಿದ್ದರೆ ಹೇಗೆ?ಬೇರೆ ಸಮುದಾಯದ ಒಗ್ಗಟ್ಟು ಮತ್ತು ತಕ್ಷಣವೇ ಪ್ರತಿಕ್ರಿಯೆ ಕೊಡುವುದನ್ನು ಕಲಿತುಕೊಳ್ಳಬೇಕಿದೆ.ಸಮಾಜಕ್ಕೆ ಅನ್ಯಾಯವಾಗುತ್ತಿರುವುದು ಗೊತ್ತಿದ್ದರೂ ಸುಮ್ಮನಿದ್ದರೆ ಸಮುದಾಯದ ಅಸ್ತಿತ್ವ ನಿಮ್ಮಿಂದಲೇ ಹಾಳಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ ರಾಜಕಾರಣದಲ್ಲಿ ಸಮಾಜ ಅಂತಾ ಬಂದಾಗ ಸಮುದಾಯದವರು ನಿರ್ಧಾರ ತೆಗೆದುಕೊಳ್ಳಬೇಕೋ ಅಥವಾ ಬೇರೆ ಸಮುದಾಯ ತೆಗೆದುಕೊಳ್ಳಬೇಕಾ ಎಂಬುದನ್ನು ನೀವೇ ನಿರ್ಧರಿಸಿ ಏಕೆಂದರೆ ಇತ್ತೀಚಿಗೆ ರಾಜಕಾರಣದಲ್ಲಿ ನಮ್ಮ ಸಮುದಾಯದ ಆಗು ಹೋಗುಗಳನ್ನು ಬೇರೆ ಸಮುದಾಯದವರೇ ನಿರ್ಧಾರ ಮಾಡುವ ಮಟ್ಟಿಗೆ ಬಿಟ್ಟು ಕೊಟ್ಟಿದ್ದು ನಾಚಿಕೆಯ ಸಂಗತಿ ಇದೇ ರೀತಿ ಮಾಡುತ್ತಾ ಹೋದರೆ ಉಪಜಾತಿಗಳ ಹೆಸರಲ್ಲಿ ಸಮಾಜ ಒಡೆದು ಹೋಗಿ 10 ಶಾಸಕರು ಆಯ್ಕೆ ಆಗುವುದು ಕಷ್ಟ ಆಗಬಹುದು ಇನ್ಮುಂದಾದರೂ ವೀರಶೈವ ಸಮಾಜದ ಶಾಸಕರು,ಸಂಸದರು,ಸಚಿವರು ಬದಲಾವಣೆ ಆಗಿ ವೀರಶೈವ ಲಿಂಗಾಯತ ಸಮುದಾಯಕ್ಕಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
-ಸಂದೀಪ ಯು.ಎಲ್.ಸೊರಬ
