ಶಿವಮೊಗ್ಗ ಸೊರಬ ತಾಲೂಕು ಆನವಟ್ಟಿಯಲ್ಲಿ ನಡೆಯುತ್ತಿರುವ ಜನನಿ ಸೇವಾ ಸಂಸ್ಥೆ ಕರ್ನಾಟಕ ರಕ್ಷಣಾ ವೇದಿಕೆ ಇವರ ಆಶ್ರಯದಲ್ಲಿ ದಿನಾಂಕ 19ರಂದು ಭಾನುವಾರ ಸಂಜೆ 6ಗಂಟೆಗೆ ಆನವಟ್ಟಿಯ ನೃಪತುಂಗ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಜನದನಿ ರತ್ನ ಪ್ರಶಸ್ತಿ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ದೀಪ ಬೆಳಗಿದ ನಂತರ ಚಿಕ್ಕ ಮಕ್ಕಳಿಂದ ಕೃಷ್ಣ ವೇಷಭೂಷಣ ಸ್ಪರ್ದೆ ಏರ್ಪಡಿಸಲಾಗಿತ್ತು ನಂತರ ಜನದನಿ ಸೇವಾ ಸಂಸ್ಥೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯು ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಕನ್ನಡ ಸಾಹಿತ್ಯ ಸಂಸ್ಕೃತಿವೇದಿಕೆಯ ಅದ್ಯಕ್ಷರು ಡಿ ಎಸ್ ಶಂಕರ್ ಶೇಟ್,ದಂತ ವೈದ್ಯ ಜ್ಞಾನೇಶ್ ಹೆಚ್.ಇ,ಹಿರಿಯ ಮುಖಂಡರಾದ ಚಂದ್ರ ಶೇಖರ್ ಜರ್ಮಲೆಯವರು,ಗಿರೀಶ್ ಕುಬಟೂರು,ತಾಲೂಕು ಆರೋಗ್ಯ ಅಧಿಕಾರಿಗಳು ಡಾ.ಪ್ರಭು ಸಾಹುಕಾರ್,ಆರಕ್ಷಕ ಉಪನಿರೀಕ್ಷಕರಾದ ರಾಜು ರೆಡ್ಡಿ ಇವರಿಗೆ ಜನದನಿ ರತ್ನ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕನ್ನಡದ ಬಗ್ಗೆ ಸೊರಬ ತಾಲೂಕಿನ ಶಕುನಳ್ಳಿಯ ಬಾಲ ಪ್ರತಿಭೆ 7 ನೇತರಗತಿ ವಿದ್ಯಾರ್ಥಿನಿ ಅನುಷಾ ಹಿರೇಮಠ್ ಆಳವಾಗಿ ಸುಂದರವಾಗಿ ಮಾತನಾಡಿದರು ಕರವೇ ತಾಲೂಕಾಧ್ಯಕ್ಷರು ಕನ್ನಡ ನಾಡು ನುಡಿ ನೆಲ ಮತ್ತು ರಕ್ಷಣೆ ಬಗ್ಗೆ ಮತ್ತು ಕಾರ್ಯಕ್ರಮದ ಕುರಿತು ಮಾತನಾಡಿದರು ಮತ್ತು ಈ ಎಲ್ಲಾ ಕಾರ್ಯಕ್ರಮ ನಿರ್ವಹಣೆ ಹಾಗೂ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿಜಯ್ ಕುಮಾರ್ ಕೆ.ಇ ಇವರು ವಹಿಸಿದ್ದರು. ಜೊತೆಯಲ್ಲಿ ತಾಲೂಕಿನಲ್ಲಿ ಉತ್ತಮ ಹೆಸರು ಮಾಡಿದ ಕಲಾಕಾರ್ ನೃತ್ಯಶಾಲೆ ಮತ್ತು ಬಾಲಾಜಿ ನೃತ್ಯ ಶಾಲೆಯ ಎಲ್ಲಾ ಮಕ್ಕಳು ಉತ್ತಮ ಪ್ರದರ್ಶನ ನೀಡಿದರು ಝೀ ಕನ್ನಡ ಕ್ಯಾತಿಯ ಜೂನಿಯರ್ ಯಶ್ ಇವರಂದ ಮನರಂಜನೆ ನೀಡಿದರು ಸಂಪೂರ್ಣ ಕಾರ್ಯಕ್ರಮವನ್ನು ಕನ್ನಡದಲ್ಲಿ ವಿಶಿಷ್ಟವಾಗಿ ನಿರೂಪಣೆಯನ್ನು ಕಿರಣ್ ಹೂಗಾರ್ ಮಾಡಿದರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಉತ್ತಮವಾಗಿ ಯಶಸ್ವಿ ಮಾಡಿದ್ದಾರೆ.
ವರದಿ-ಶರತ್ ಗೌಡರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.