ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭವಿಷ್ಯದ ಸಿದ್ಧತೆ ಇಂದಿನಿಂದಲೇ ಪ್ರಾರಂಭವಾಗಲಿ: ಡಾ.ನಿಶಾತ ಆರೀಫ್ ಹುಸ್ಸೇನಿ

ಕಲಬುರಗಿ:ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಇಂದಿನಿಂದಲೇ ವ್ಯವಸ್ಥಿತ ಪರಿಶ್ರಮದ ಜೊತೆಗೆ ಅಗತ್ಯವಾದ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ವಿಜ್ಞಾನ ನಿಕಾಯದ ಡೀನ ಡಾ. ನಿಶಾತ ಅರೀಫ್ ಹುಸ್ಸೇನಿ ಹೇಳಿದರು.ಅವರು ಬುಧವಾರ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರದ ವಿಭಾಗದಲ್ಲಿ ಲೈಫ್ ಸೈನ್ಸ್‌ ವಿಷಯದಲ್ಲಿರುವ ವೃತ್ತಿ ಮತ್ತು ಉದ್ಯೋಗದ ನಿರೀಕ್ಷೆಗಳ ಕುರಿತ ಪ್ರಾದೇಶಿಕ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೆಲವೊಮ್ಮೆ ಕಲಾ ವಿಭಾಗದಿಂದ ವಿಜ್ಞಾನ ವಿಷಯ ವಿಜ್ಞಾನದಿಂದ ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಪದವಿ ಹಂತದಿಂದಲೇ ಆಸಕ್ತಿಯ ವಿಷಯ ಕಲಿಯಬೇಕು. ನಿರ್ದಿಷ್ಟ ಗುರಿಯೊಂದಿಗೆ ಪ್ರಯತ್ನ ಪಟ್ಟರೆ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಅವರು ಸಂಕಿರಣದ ಆಯೋಜಕರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ವಿಜ್ಞಾನ ನಿಕಾಯದ ಅಡಿಯಲ್ಲಿ ಬರುವ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಲೈಫ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸುಮಾರು 200 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡು ಭಾಗವಹಿಸಿದ್ದರು.
ಒಂದು ದಿನದ ಈ ಉಪನ್ಯಾಸ ಕಾರ್ಯಕ್ರಮದಲ್ಲಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಸಬಿಎಲ್ಎಂ ಸಿ ಸದಸ್ಯ ಪ್ರೊ.ಶಂಕೆರಪ್ಪ ಹಟ್ಟಿ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಯ ಬಗ್ಗೆ ಗೊಂದಲವಿದ್ದು,ಅದನ್ನು ಸ್ವಂತ ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳಬೇಕಿದೆ. ಅದರಲ್ಲೂ ಪ್ರಾಣಿಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇರುವ ಅಪಾರ ಅವಕಾಶಗಳನ್ನು ವಿವರಿಸಿದರು.
ಝೆಡ್ ಏಆರ್ಎಸನ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶರಣಬಸಪ್ಪ ಏರಿ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಅವಶ್ಯವಾದ ಕೌಶಲ್ಯಗಳು ಮತ್ತು ಅವಕಾಶಗಳನ್ನು ಕುರಿತು ವಿವರಿಸಿದರು ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜಾ ಸಮರ್ಸಿನ್ ಮೋದಿ ಇವರು ಸಸ್ಯಶಾಸ್ತ್ರದ ಮಹತ್ವ,ಶಿಕ್ಷಣಕ್ಕೆ ಲಭ್ಯವಿರುವ ವಿದ್ಯಾರ್ಥಿವೇತನ, ಸಂಶೋಧನೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸಿದರು.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜಾವೆದ್ ಅಖತರ್ ವಿಜ್ಞಾನ ಪದವಿಧರರು ಮುದ್ರಣ,ರೇಡಿಯೋ,ಟಿವಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಬಹುದು ಎಂಬುದನ್ನು ಉದಾಹರಣೆ ಸಮೇತ ವಿವರಿಸಿ ವಿದ್ಯಾರ್ಥಿಗಳು ಪತ್ರಕರ್ತರಾಗುವಂತೆ ಪ್ರೆರೇಪಿಸಿದರು.
ಈ ಕಾರ್ಯಕ್ರಮವನ್ನು
ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿ ಡಾ.ಹೀನಾ ವರದಿಯನ್ನು ಪ್ರಸ್ತುತ ಪಡಿಸಿದರು ನೀಲಕಂಠ ಸ್ವಾಮಿ ಮತ್ತು ಪದವಿ ವಿದ್ಯಾರ್ಥಿನಿ ಅಹ್ಮದಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ವಿದ್ಯಾರ್ಥಿನಿಯರಾದ ಸಯ್ಯದಾ ಹಾಜರಾ ವಂದಿಸಿದರೆ,ಫೈಜಾ ನಾಜ್ ಮತ್ತು ಮದಿಹಾ ಅಫ್ರಾ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಡಾ ಫೆಮಿದ,ಡಾ ಮೈಮುನ, ಡಾ. ಅಥರ್,ಡಾ.ಅಬ್ರಾರ್,ಡಾ.ಅತಿವುಲ್ಲ,ಡಾ. ಸುನಿಲ್,ಡಾ ನಗಮಾ,ಡಾ ಹಮೀದ್ ಅಕ್ಬರ್,ಡಾ. ವಿನೋದ್,ಡಾ.ಬದರಿನಾಥ್,ಡಾ ಸನಾ ಇಜಾಜ,ಸಫಿ,ಡಾ ಮನಿಷಾ ಪಾಟೀಲ,ಲೂಬ್ನ, ಅಫಶಾನ ಅಂಜುಮ ಮತ್ತು ಡಾ ನಮ್ರತಾ ರಾವುತ್ ಸೇರಿದಂತೆ ಮುಂತಾದವರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ