ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳ ಗ್ರಾಮದಲ್ಲಿ ಮಕ್ಕಳಿಗೆ ದಿನಕ್ಕೊಂದು ಕಾರ್ಯಕ್ರಮ ಪೋಷಕರಿಗೆ ತಿಂಗಳಿಗೊಂದು ಕಾರ್ಯಕ್ರಮ ಜರುಗಿಸಲಾಯಿತು, ಪೋಷಕರಣೆ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ಮಕ್ಕಳ ಚಿತ್ರೀಕರಣ ದೃಶ್ಯವನ್ನು ನೋಡಿ,ತಾಯಂದಿರು ಸಂತಸ ಪಟ್ಟರು,ಮಕ್ಕಳಂತೆ ತಾಯಂದಿರು ಮಕ್ಕಳ ಜೊತೆ ಆಟ ಆಡಿ ಕುಣಿದು ಕುಪ್ಪಳಿಸಿದರು,ಮಕ್ಕಳಿಗೆ ದಿನಕ್ಕೊಂದು ಚಿತ್ರೀಕರಣ ದಿನಕ್ಕೊಂದು ಕಾರ್ಯಕ್ರಮಗಳನ್ನು,ಬರೆಸುವುದು, ಓದುವುದು ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಪಲ್ಲವಿಯವರು ಮಕ್ಕಳಿಗೆ ಪರಿಜ್ಞಾನದ ಶಿಕ್ಷಣವೂ ನೀಡಿದರ ಜೊತೆಗೆ ಮಕ್ಕಳನ್ನು ಶಿಕ್ಷಣದ ಜ್ಞಾನಕ್ಕೆ ಕರೆತಂದಿದ್ದಾರೆ ಎಂದು ತಾಯಂದಿರು ತಮ್ಮ ಅನಿಸಿಕೆಯ ಮೂಲಕ ಸಂತಸ ಪಟ್ಟರು,ನಂತರ ಶಿಕ್ಷೆಕೆಯಾದ ಶ್ರೀಮತಿ ಪಲ್ಲವಿ ಮಾತನಾಡಿ,ಮನೆ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು, ತಾಯಿಯ ಮಡಿಲಲ್ಲಿ ಮಕ್ಕಳ ಶಿಕ್ಷಣದ ಸಂಸ್ಕಾರ ಪರಿಜ್ಞಾನವೂ ಮನೆಯಲ್ಲಿ ತಾಯಂದಿರು ತುಂಬಿರಬೇಕು ನಂತರ,ಶಾಲೆಗಳಲ್ಲಿ ಮಕ್ಕಳು ಶಿಕ್ಷಣದ ಸರಳವಾಗಿ ಅರ್ಥಪೂರ್ಣವಾಗಿ ಮಾಡಿಕೊಳ್ಳುತ್ತಾರೆ ಎಂದರು,ಈ ಸಂದರ್ಭದಲ್ಲಿ ಹಳೆ ಗೊಂಡಬಾಳ ಎರಡನೇ ಅಂಗನವಾಡಿಯ ಕೇಂದ್ರದ ಶಿಕ್ಷಕಿಯಾದ ಶ್ರೀಮತಿ ಪಲ್ಲವಿ ಪೊಲೀಸ್ ಪಾಟೀಲ್ ಮತ್ತು ಅಂಗನವಾಡಿ ಸಹಾಯಕಿ, ತಾಯಂದಿರು ಮಕ್ಕಳು ಭಾಗಿಯಾಗಿದ್ದರು.
