ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ,ಜೇವರ್ಗಿ ತಾಲೂಕ ತತ್ವಪದಕಾರರ ಸಮ್ಮೇಳನವು ಪಟ್ಟಣದ ಹಳೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನವೆಂಬರ್ 25 ರಂದು ಶನಿವಾರ ಹಮ್ಮಿಕೊಂಡ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ವತಿಯಿಂದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ ಕಸಾಪ ತಾಲೂಕು ಅಧ್ಯಕ್ಷರಾದ ಎಸ್.ಕೆ.ಬಿರಾದರ್ ನಮ್ಮ ಜೇವರ್ಗಿ ತಾಲೂಕ ತತ್ವ ಪದಕಾರರ ತವರೂರು ಆಗಿದ್ದು, ಕಡಕೋಳ ಮಡಿವಾಳಪ್ಪ ರಾಮಪುರದ ಬಕಪ್ಪಯ್ಯ, ಚನ್ನೂರಿನ ಜಲಾಲ ಸಾಹೇಬರು,ಮೋಟನಳ್ಳಿ ಹಸನ ಸಾಬ್ ಇಂತಹ ಅನೇಕ ತತ್ವಪದಕಾರರು ನಮ್ಮ ತಾಲೂಕಿನವರು ಎಂದು ಹೇಳಲು ಹೆಮ್ಮೆ ಎಂದೆನಿಸುತ್ತದೆ.ಜೇವರ್ಗಿ ತಾಲೂಕಿನಲ್ಲಿ ವಿಶಿಷ್ಟವಾಗಿ ವಿನೂತನವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತತ್ವಪದಕಾರರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಈ ತತ್ವಪದಕಾರರ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರಾಗಿ ಕುಂಟ ಕೋಣ ಮೂಕ ಜಾಣ ಕಾಮಿಡಿ ನಾಟಕದ ರಚನೆಕಾರರಾದ ಜೇವರ್ಗಿ ರಾಜಣ್ಣ ನವರು ವಹಿಸಿಕೊಂಡಿದ್ದಾರೆ,ಈ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕರಾದ ಡಾ. ಅಜಯ ಸಿಂಗ್,ಕಸಾಪ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಾರ್ಯಕ್ರಮದಲ್ಲಿ ಕುಂಟ ಕೋಣ ಮೂಕ ಜಾಣ ಕಾಮಿಡಿ ನಾಟಕದ ದಯಾನಂದ್ ಬೆಳಗಿ ಶ್ರೀಮತಿ ಶ್ವೇತಾ ಬಿಳಗಿ ಅವರು ವಿಶೇಷವಾಗಿ ಭಾಗವಹಿಸಲಿದ್ದು ತಾಲೂಕ ಅನೇಕ ಕನ್ನಡಪರ ಸಂಘಟನೆಗಳು ಎಲ್ಲಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ಪ್ರಾಚಾರ್ಯರು ಮುಖ್ಯ ಉಪಾಧ್ಯಾಯರು ಶಿಕ್ಷಕರು ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿನಿಯರು ಈ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಬೆಳಗ್ಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಡಾ.ಶಿವಾನಂದ ಮಹಾ ಸ್ವಾಮಿಗಳು ಚಾಲನೆ ನೀಡಲಿದ್ದಾರೆ.ತದನಂತರ ತತ್ವಪದಕಾರರ ಸಮ್ಮೇಳನವನ್ನು ಉದ್ಘಾಟನೆ ಹಾಗೂ ಮಧ್ಯಾಹ್ನ ಎರಡು ಹಂತಗಳಲ್ಲಿ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಅನೇಕ ಕವಿಗಳು ಭಾಗವಹಿಸಲಿದ್ದಾರೆ ಕೊನೆಯದಾಗಿ ಈ ತತ್ವಪದಕಾರ ಸಮ್ಮೇಳನ ಕಾರ್ಯಕ್ರಮವು ಸಮಾರೋಪ ದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಸಭೆಯನ್ನು ಉದ್ದೇಶಿಸಿ ಎಸ್.ಕೆ.ಬಿರಾದರ್ ಅವರು ಸಮ್ಮೇಳನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಜೇವರ್ಗಿಯ ಪ್ರವಾಸಿ ಮಂದಿರದಲ್ಲಿ ನಡೆದ ಈ ತತ್ವಪದಕಾರರ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕಸಾಪ ಗೌರವಾಧ್ಯಕ್ಷರಾದ ಚೆನ್ನಮಲ್ಲಯ್ಯ ಹಿರೇಮಠ್,ಗೌರವ ಕಾರ್ಯದರ್ಶಿಗಳಾದ ಕಲ್ಯಾಣ ಕುಮಾರ್ ಸಂಗಾವಿ, ಚಂದ್ರಶೇಖರ ತುಂಬಗಿ,ಡಾ. ಧರ್ಮಣ್ಣ.ಕೆ.ಬಡಿಗೇರ್,ಡಾ.ಹಣಮಂತರಾಯ ರಾಂಪುರ,ಶ್ರೀ ಹರಿ ಕರಕಿಹಳ್ಳಿ,ಎಸ್.ಟಿ.ಬಿರಾದರ್, ರಾಜು ಮುದ್ದಡಗಿ,ಬಸವರಾಜ್ ಬಿ ಬಾಗೇವಾಡಿ, ಬಸವರಾಜ್ ಹಡಪದ,ಮಹಿಳಾ ಪ್ರತಿ ನಿಧಿಯಾದ ಸುಧಾ ಬೆಣೂರ,ಸೇರಿ ಕಸಾಪದ ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.