ಕಲಬುರಗಿ/ಕಾಳಗಿ:ಸರ್ವ ಜನಾಂಗಕ್ಕೂ ಸಮಾನರಾಗಿರುವ ಈ ಭಾಗದ ಇಷ್ಟ ದೈವ ಸೂಗೂರ ಶ್ರೀ ಮಠದ ಗುರುಗಳಾಗಿ ಸದಾಕಾಲವೂ ಜನರ ಕಲ್ಯಾಣಗೋಸ್ಕರ ಹಾಗೂ ಕನಸು ಹೊತ್ತ ಸಾವಿರಾರು ಭಕ್ತರ ಹೆಮ್ಮೆಯ ಗುರುಗಳಾಗಿ ಡಾ.ಚನ್ನರುದ್ರ ಸ್ವಾಮಿಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಜನರ ಹೃದಯದಲ್ಲಿ ಇದಾರೆ. ಭಕ್ತರ ಕನಸುಗಳನ್ನು ಕಲ್ಯಾಣ ಮಾಡಲು ಧ್ಯಾನ, ಹೋಮ,ಹವನ ಹಾಗೂ ಅನುಷ್ಠಾನಗಳನ್ನು ಮಾಡುತ್ತ ಶ್ರಮಿಸುವ ಸರಳ ಸಜ್ಜನಿಕೆಯ ಹೆಮ್ಮೆಯ ಶ್ರೀಗಳು ಶ್ರೀ ಚನ್ನರುದ್ರ ಸ್ವಾಮಿಜಿಗಳು ಕಾಳಗಿ ತಾಲ್ಲೂಕು ಸೂಗುರ ಗ್ರಾಮದ ಚನ್ನರುದ್ರ ಶ್ರೀಮಠದ ಭಕ್ತ ಗಣ ಹಾಗೂ ಶ್ರೀ ಗಳು ಸಾವಿರಾರು ಕೋಟಿಗಳಷ್ಟು ಅನುದಾನದಲ್ಲಿ ಶ್ರೀ ಮಠವನ್ನು ಅಭಿವೃದ್ಧಿ ಮಾಡಲು ಶ್ರಮ ಪಡುತ್ತಿದ್ದಾರೆ ಗಿರಿಗಳ ನಡುವೆ ಇರುವ ಈ ಸೂಗುರ ಗ್ರಾಮವು ಶ್ರೀ ಗಳಿಂದ ಪುಣ್ಯಕ್ಷೇತ್ರವಾಗಿದೆ ಸುಮಾರು 600 ಹೆಚ್ಚು ಐತಿಹಾಸಿಕ ಪರಂಪರೆ ಹೊಂದಿದ ಈ ಮಠವು ಉಜ್ಜಯಿನಿ ಸದ್ದರ್ಮ ಸಿಂಹಾಸನದ ಪರಂಪರೆಯ ಶಾಖಾನುವರ್ತಿಯಲ್ಲಿ ಬರುವ ಮಠ ಇದಾಗಿದೆ ಶ್ರೀಮಠ ಆದಿ ಪುರುಷರು ಎಂದು ಪೂಜ್ಯ ಶ್ರೀ ಚನ್ನಬಸವ ಶಿವಾಚಾರ್ಯರೆಂದು ಹೇಳಲಾಗುತ್ತದೆ ಅದಕ್ಕೆ ಸಾಕ್ಷಿಯೆಂಬಂತೆ ಶ್ರೀಮಠದ ಹೃದಯ ಭಾಗದಲ್ಲಿ ಕತೃ ಗದ್ದುಗೆ ಇದೆ
ಶ್ರೀ ಮಠದ ಪರಂಪರೆಯಲ್ಲಿ ಬರುವ ಪೂಜ್ಯಶ್ರೀ ಷ ಬ್ರ.ರುದ್ರಮುನಿ ಶಿವಾಚಾರ್ಯರ ಹೆಸರು ಹಲವಾರು ಪವಾಡಗಳನ್ನು ಮಾಡಿ ಲೋಕ ಕಲ್ಯಾಣಗೈದಿದ್ದಾರೆ ಮತ್ತು ರುದ್ರಮುನಿ ಶಿವಾಚಾರ್ಯರು ತ್ರಿಕಾಲ ಪೂಜಾ ನಿಷ್ಠರು ಮಹಾತಪಸ್ವಿಗಳು ಕೃಷಿಯಲ್ಲಿಯೂ ಖುಷಿ ಕಂಡವರು ಈ ಮಠವು ಐತಿಹಾಸಿಕ ಪರಂಪರೆಯ ಶ್ರೀಮಠಕ್ಕೆ 9ನೇ ಉತ್ತರಾಧಿಕಾರಿಯಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೊಟೂರಿನ ಶ್ರೀ ವಿನೋದಯ್ಯ ಹಾಗೂ ಸುಲೋಚನಾ ದಪಂತಿಗಳ ಹಿರಿಯ ಪುತ್ರ ಶ್ರೀ ಶಿವಾನಂದ ದೇವರು ಸುತ್ತುರಿನ ಮಠದಲ್ಲಿ ಸಾಹಿತ್ಯ ಸಂಸ್ಕೃತ ಪುರಾಣ ಪ್ರವಚನಗಳ ಅಧ್ಯಾಯನ ಮಾಡಿ ನಂತರ ಮಾನಸ ಗಂಗೋತ್ರಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ ಆವಾಗಲೆ ಶ್ರೀಗಳಿಗೆ 23ರ ಪ್ರಾಯದ ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿತ್ತು ನಿಯೋಜನೆಗೊಂಡಾಗಲೆ ಶ್ರೀ ಶಿವಾನಂದ ಶ್ರೀಗಳು ರಕ್ತ ಸಂಬಂಧ ತೋರೆದು ಭಕ್ತ ಸಂಬಂಧಗಳಾಗಿ ರುದ್ರಮುನೇಶ್ವರ ಹೀರೆಮಠವನ್ನರಿಸಿಕೊಂಡು ಬರುತ್ತಾರೆ 8 ಜನ ಶಿವಾಚಾರ್ಯರು ನಡೆದಾಡಿದ ಶ್ರೀಮಠಕ್ಕೆ 9ನೇ ಉತ್ತರಾಧಿಕಾರಿಯಾದ ಶ್ರೀ ಗಳು ಮಠದ ವೈಭವ ಜೊತೆಗೆ ಭಕ್ತರ ದುಚ್ಚಟಗಳನ್ನು ಮರೆಸುವ ಮಹಾ ದೇವರಾಗಿ ಭಕ್ತರ ಕಷ್ಟ ಸುಖಗಳಲ್ಲಿ ಬಾಗಿಯಾಗಿ ಧರ್ಮದಲ್ಲಿ ಆದ್ಯತೆಗಳನ್ನು ತೋರಿಸುವ ಮೂಲಕ ದರ್ಮ ರಕ್ಷಣೆ ಮಾಡಲು ನಿರತರಾಗಿದ್ದಾರೆ ಹಾಗೂ ತಮ್ಮ ಹುಟ್ಟು ಹಬ್ಬವನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಭಕ್ತಗಣ ಆಚರಣೆ ಮಾಡುವರು ಈ ವರ್ಷ ಸಸಿಗಳನ್ನು ನೀಡುವ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡರು.
ವರದಿ:ರಾಜೇಂದ್ರ.ಎನ್.ಕೊಲ್ಲೂರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.