ಯಾದಗಿರಿ:ಶಹಾಪುರ ತಾಲೂಕಿನ ಮಾಂಗಿಲಾಲ ಜೈನ ಶಾಲೆಯಲ್ಲಿ ಇಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಯಾದಗಿರಿ ಇವರಿಂದ ವಾಯುಮಾಲಿನ್ಯ ನಿಯಂತ್ರಣ ಜಾಗ್ರತಿ ಮಾಸಾಚರಣೆ ನವೆಂಬರ್ 2023 ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಿಲಿಂದ್ ಕುಮಾರ್ ರವರು ಉದ್ಘಾಟಿಸಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಾಂಗಿಲಾಲ ಜೈನ್ ವಹಿಸಿದ್ದರು.ಅದೇ ರೀತಿಯಾಗಿ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ದಿನೇಶ್ ಜೈನ್ ಪ್ರಾಂಶುಪಾಲರಾದ ಶ್ರೀ ವಂಶಕೃಷ್ಣ ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರಾಜೇಶ್ವರಿ.ಜಿ ಹಾಗೂ ಸಂಸ್ಥೆ ಎಲ್ಲಾ ಸಿಬ್ಬಂದಿಗಳು ಮತ್ತು ಯಾದಗಿರಿ ಜಿಲ್ಲಾ ಡ್ರೈವಿಂಗ್ ಸ್ಕೂಲ್ ಮಾಲಿಕರ ಅಸೋಸಿಯೇಷನ್ ಅಧ್ಯಕ್ಷರಾದ ಯಲ್ಲಪ್ಪ ದೊಡ್ಡಮನಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಇಂದಿನ ದಿನಮಾನದಲ್ಲಿ ವಾಹನಗಳಿಂದ ವಿಷಕಾರಿ ಅನಿಲ ಸೂಸುವದರಿಂದ ಮನುಷ್ಯನ ಜೀವಕ್ಕೆ ಕಂಟಕ ಇದರಿಂದ ಅನೇಕ ರೋಗಗಳನ್ನು ಬರುತ್ತಿವೆ ಆದ್ದರಿಂದ ಸಾರ್ವಜನಿಕರು ವಾಯುಮಾಲಿನ್ಯ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮ ಹಾಗೂ ವಾಯುಮಾಲಿನ್ಯದಿಂದ ಆಗುವ ದುಷ್ಪರಿಣಾಮದ ಬಗ್ಗೆ ವಿವರಿಸಿದರು ಅದೇ ರೀತಿಯಾಗಿ ಪ್ರಾರ್ಥನಾ ಗೀತೆಯನ್ನು ಕುಮಾರಿ ಸಂಜನಾ ಅವರು ಹಾಡಿದರು,ಸ್ವಾಗತ ಭಾಷಣ ಶ್ರೀಮತಿ ಅಶ್ವಿನಿ ಅವರು ಮಾಡಿದರು.
ಜೈನ ಶಾಲೆಯಲ್ಲಿ ವಾಯು ಮಾಲಿನ್ಯ ಜಾಗೃತ ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಶ್ರೀಮತಿ ಅಂಬಿಕಾ ಅವರು ಹಾಗೂ ಕೊನೆಯಲ್ಲಿ ವಂದನಾರ್ಪಣೆಯನ್ನು ಶ್ರೀಮತಿ ನಂದಿನಿ ಪಾಟೀಲ್ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಮಾಂಗಿಲಾಲ ಜೈನ ಶಾಲೆಯ ಶಿಕ್ಷಕ, ಶಿಕ್ಷಕಿಯರು,ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.