ಯಾದಗಿರಿ:2023-24ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭಾರತೀಯ ಹತ್ತಿ ನಿಗಮ ವತಿಯಿಂದ ಗರಿಷ್ಠ ರೂ.7020 ರಂತೆ ಪ್ರತಿ ಕ್ವಿಂಟಾಲ್ ಗೆ ರೈತರಿಂದ ಹತ್ತಿ ಖರೀದಿಸಲು ಶಹಾಪುರ ಸಮಿತಿಯ ವ್ಯಾಪ್ತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಶಹಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಫ್ಯಾಕ್ಟರಿಯ ಹೆಸರು,ದೂರವಾಣಿ ಸಂಖ್ಯೆ ಶ್ರೀ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟಿçÃಜ್ ಹಲಕಲ್ ಮೊ.ನಂ.9449027777, ಮಹಾಲಕ್ಷ್ಮಿ ಆಗ್ರೋ ಇಂಡಸ್ಟ್ರೀಸ್ ಗೋಗಿ ರಸ್ತೆ ಗೋಗಿ ಮೊ.ನಂ.9972543848,ಬಸವರಾಜಪ್ಪ ಸಜ್ಜನ್‌ಶೆಟ್ಟಿ ಸಿ.ಎ ಇಂಡಸ್ಟ್ರೀಸ್ ಹಳ್ಳಿಸಗರ ಮೊ.ನಂ.9480160938,ಶ್ರೀ ಬಸವಜೋತಿ ಕಾಟನ್ ಜಿನ್ನಿಂಗ್ ಫ್ಯಾಕ್ಟರಿ,ಅರಳಹಳ್ಳಿ ಕ್ರಾಸ ಮೊ.ನಂ.9986198916,ಶ್ರೀ ಬನಶಂಕರಿ ಇಂಡಸ್ಟ್ರೀಸ್ ಹಳ್ಳಿಸಗರ ಮೊ.ನಂ.9880243398, ಮಂಜಿತ್ ಕಾಟನ್ ಫ್ರವೈಟ್ ಲಿಮಿಟೆಡ್ ಶಹಾಪುರ ಗೋಗಿ ಮೊ.ನಂ.9481456956,ಮಂಜಿತ್ ಕಾಟನ್ ಫ್ರವೈಟ್ ಲಿಮಿಟೆಡ್ ಅರಳಹಳ್ಳಿ ಕ್ರಾಸ, ಆರ್,ಎಸ್,ಪೈಬರ್ಸ್,ಮದ್ದರಕಿ ಮೊ.ನಂ.9353255320,ಶ್ರೀ ಸಂಗಮೇಶ್ವರ ಇಂಡಸ್ಟ್ರೀಸ್, ಹೈಯಾಳ ರಸ್ತೆ ಬಸವಂತಪುರ ಮೊ.ನಂ.9900630743.
ರೈತರು ಕಡ್ಡಾಯವಾಗಿ ಆಧಾರ ಪ್ರತಿ,ಮತ್ತು ಪಹಣಿಯಲ್ಲಿ ಹತ್ತಿ ಬೆಳೆ ನಮೂದಾಗಿರುವ ಪಹಣಿಯನ್ನು ತೆಗೆದುಕೊಂಡು ಹತ್ತಿಯನ್ನು ಖುಲ್ಲಾ (ಬಿಡಿ) ರೂಪದಲ್ಲಿ ತರಬೇಕು ಖರೀದಿಸಿದ ಮೊತ್ತವನ್ನು ನೇರವಾಗಿ ಆಧಾರ ಜೋಡಣೆ ಇರುವ ರೈತರ ಬ್ಯಾಂಕ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಭಾರತೀಯ ಹತ್ತಿ ನಿಗಮವು ರೈತರ ಹಿತದೃಷ್ಠಿಯಿಂದ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹತ್ತಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡುವುದರಿಂದ ರೈತ ಭಾಂಧವರು ಸದರಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾಮ ಕುಮಾರ ಮೋ.ಸಂ.6300585228,ಶ್ರೀ ರಾಜಶೇಖರಯ್ಯಾ 9945875003,ಶ್ರೀ ಪಂಪಣ್ಣ 9611000425,ಶ್ರೀ ಆಶಪ್ಪ 6362861821,ಶ್ರೀ ಮಹೇಶ 7204171312ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ವರದಿ:ಶಿವರಾಜ ಸಾಹುಕಾರ್ ವಡಗೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.