ಶಹಾಪುರ:ಧಾರ್ಮಿಕತೆಗೆ ಒಳಗಾಗಿ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದಾಗ ಮಾತ್ರ ಮೋಕ್ಷ ದೊರಕಿ ಬದುಕಿಗೆ ನೆಮ್ಮದಿ ದೊರಕಲು ಸಾಧ್ಯ ಎಂದು ಫಕೀರೇಶ್ವರ ಮಠದ ಪರಮಪೂಜ್ಯ ಗುರುಪಾದ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಸಗರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಅಚ್ಚಪ್ಪಗೌಡ ಹಾಗೂ ಶಂಕ್ರಮ್ಮ ಗೌಡ್ತಿ ಸುಭೇದಾರ ಸ್ಮರಣಾರ್ಥವಾಗಿ ಜೀರ್ಣೋದ್ಧಾರಗೊಂಡ ಜೋಡಬಸವ ದೇವಸ್ಥಾನ ಅನಾವರಣ ಕಾರ್ಯಕ್ರಮದ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿ,ಇಂತಹ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಯುವ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.ವೇದಿಕೆ ಮೇಲೆ ಉಪಸ್ಥಿತರಿರುವ ಶಹಾಪುರ ಏಕದಂಡಿಗಿ ಮಠದ ಅಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಧಾರ್ಮಿಕತೆ ಎಂದರೆ ಕೇವಲ,ಭಾವ ಭಕ್ತಿಗೆ ಸಂಬಂಧಿಸಿದ ವಿಷಯವಲ್ಲ,ಅದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ನಡತೆಯಲ್ಲಿರುತ್ತದೆ, ಅಂತಹ ಸಂಪ್ರದಾಯ ಮತ್ತು ಸುಸಂಸ್ಕೃತ ಮನೆತನವೆಂದರೆ ಅದು ಸುಬೇದಾರರ ಮನೆತನವೆಂದು ಬಣ್ಣಿಸಿದರು ಇಂತಹ ಧಾರ್ಮಿಕ ಕಾರ್ಯಗಳು ಹೆಚ್ಚು ಹಮ್ಮಿಕೊಳ್ಳುವುದರಿಂದ ಈ ಜಗದ ಸಂಪತ್ತು,ಸುಖ,ಶಾಂತಿ,ನೆಮ್ಮದಿ ಸಮೃದ್ಧಿಯಾಗಿ ಬೆಳಗಲಿದೆ ಎಂದು ನುಡಿದರು.ಈ ಸಂದರ್ಭದಲ್ಲಿ ಜೀರ್ಣೋದ್ಧಾರ ದಾಸೋಹಿಗಳಾದ ನಾಗನಗೌಡ ಸುಬೇದಾರ ದಂಪತಿಗಳಿಗೆ ವಿಶೇಷವಾಗಿ ಸನ್ಮಾನಿಸಿ ಸತ್ಕರಿಸಲಾಯಿತು.
ಸಮಾರಂಭದ ವೇದಿಕೆ ಮೇಲೆ ಸಗರ ಒಕ್ಕಲಗರ ಹಿರೇಮಠದ ಪರಮಪೂಜ್ಯ ಮರಳು ಮಾಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು, ಸುರುಪುರ ನಿಷ್ಟಿ ಕಡ್ಲೆಪ್ಪನವರ ಮಠದ ಪ್ರಭುಲಿಂಗ ಮಹಾ ಸ್ವಾಮಿಗಳು,ನಾಗಠಾಣ ಹಿರೇಮಠದ ಪೂಜ್ಯರಾದ ಸೋಮೇಶ್ವರ ಶಿವಾಚಾರ್ಯರು, ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ ಅವರು ಉಪಸ್ಥಿತರಿದ್ದರು,ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿಪಾಟೀಲ್,ಶರಣಗೌಡ ಸುಬೇದಾರ, ಡಾ.ಚಂದ್ರಶೇಖರ ಸುಬೇದಾರ,ಸಿದ್ದಲಿಂಗಣ್ಣಗೌಡ ಸುಬೇದಾರ,ಸುಭಾಷಗೌಡ ಸುಬೇದಾರ,ಹಿರಿಯ ಸಾಹಿತಿ ಲಿಂಗಣ್ಣ ಪಡಶೆಟ್ಟಿ,ಶರಬಣ್ಣ ರಸ್ತಾಪುರ ಇತರರು ಹಾಜರಿದ್ದರು ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು,ಶ್ರೀಕಾಂತಗೌಡ ಸುಬೇದಾರ ಸ್ವಾಗತಿಸಿ ವಂದಿಸಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.