ಗದಗ/ನರಗುಂದ:ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ,ಯುವಕರಿಗೆ,ರೈತರಿಗೆ,ಹಿರಿಯ ನಾಗರಿಕರಿಗೆ,ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ತಾಲೂಕಿನ ಹುಣಶೀಕಟ್ಟಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ವಿತರಣೆ ಮಾಡಲಾಯಿತು.ರಾಜ್ಯ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಶಿಕ್ಷಣ ಪೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶ್ರೀ ಯಲ್ಲಪ್ಪ ಸಾಳುಂಕೆ ಇವರ ನಿರ್ದೇಶನದಂತೆ, ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ತಾಲೂಕಾ ಸಂಯೋಜಕರಾದ ಶ್ರೀ ನಾಗರಾಜ ಪ್ರಚಂಡಿ ಇವರು ಹುಣಶೀಕಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ.ವಿ.ಆರ್.ರಾಯನಗೌಡ್ರ ಅವರಿಗೆ ವಿತರಿಸಲಾಯಿತು ನಂತರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು,ಕಾರ್ಯದರ್ಶಿಗಳು ಮತ್ತು ಎಲ್ಲಾ ಆಡಳಿತ ವರ್ಗದವರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಪಾಲಕರಾದ ಶ್ರೀ. ನಿಂಗನಗೌಡ ಜಾಮದಾರ ಅವರಿಗೆ ಹಸ್ತಾಂತರಿಸಲಾಯಿತು ಈ ಯೋಜನೆ ಈಗಾಗಲೇ ಗದಗ ಜಿಲ್ಲೆಯ 59 ಗ್ರಂಥಾಲಯದಲ್ಲಿ ಜಾರಿಯಲ್ಲಿದ್ದು,ನರಗುಂದ ತಾಲೂಕಿನಲ್ಲಿ ಮೊದಲ ಹಂತದಲ್ಲಿ ಹದಲಿ,ಕೊಣ್ಣೂರ,ಸುರಕೋಡ, ಹುಣಶೀಕಟ್ಟಿ ಗ್ರಂಥಾಲಯಗಳನ್ನು ಆಯ್ಕೆಮಾಡಿಕೊಳ್ಳಲಾಗಿದ್ದು,ಮುಂದಿನ ಹಂತದಲ್ಲಿ ಉಳಿದ ಗ್ರಂಥಾಲಯಗಳನ್ನು ಈ ಯೋಜನೆ ಹಂತ-ಹಂತವಾಗಿ ಸೇರಿಸಿಕೊಳ್ಳುವುದಾಗಿ ಶಿಕ್ಷಣ ಪೌಂಡೇಷನ್‌ನ ತಾಲೂಕಾ ಸಂಯೋಜಕರಾದ ಶ್ರೀ ನಾಗರಾಜ ಪ್ರಚಂಡಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ತಾಲೂಕಾ ಸಂಯೋಜಕರಾದ ಶ್ರೀ ನಾಗರಾಜ ಪ್ರಚಂಡಿ,ಪಿಡಿಒ ಶ್ರೀ.ವಿ.ಆರ್. ರಾಯನಗೌಡ್ರ,ಗ್ರಾ.ಪಂ.ಕಾರ್ಯದರ್ಶಿಗಳಾದ ಶ್ರೀ.ಕೆ.ಎನ್.ಹದಗಲ್,ಗ್ರಾ.ಪಂ.ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವರದಿ-ನಾಗರಾಜ ಪ್ರಚಂಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.