ರವಿ ಮೂಡುವ ವೇಳೆ
ಚಂದಿರನ್ನು ಸರಿದಿಹನು
ಚಿಲಿಪಿಲಿ ಹಕ್ಕಿಯ ಕಲರವ ಕೇಳಿ
ಬೆಳಕಿನ ಚಿತ್ತಾರದ ರಂಗೋಲಿಯನ್ನು ನೋಡಿ
ಮೂಡಿರುವನು ಮೂಡಣ ದಿಕ್ಕಿನಲ್ಲಿ
ಚೆಲ್ಲುತ್ತಿರುವನು ಬೆಳಕಿನ ಕಾಂತಿಯನ್ನು ಅಲ್ಲಿ
ಇವನು ಇದ್ದೊಡೆ ಜೀವನವೇ ಇಲ್ಲಿ
ಸಕಲ ಜೀವರಾಶಿಗಳು ಇವನ ನೆಲೆಯಲ್ಲಿ
ಆಕಾಶದ ಅಂಗಳದಲ್ಲಿ ತೇಲುತ್ತಿರುವನು ರವಿಮಾಮ
ಅಮ್ಮ ಕರೆಗೆ ಬಂದಿಹನು ಚಂದ್ರ ಮಾಮ
ನಕ್ಷತ್ರಗಳ ಗುಂಪಿಗೆ ಇವನೇ ಯಜಮಾನ
-ಚಂದ್ರಶೇಖರಚಾರಿ ಎಂ
ಶಿಕ್ಷಕರು,ವಿಶ್ವ ಮಾನವ ಶಾಲೆ ಸೀಬಾರ ಗುತ್ತಿ ನಾಡು ಚಿತ್ರದುರ್ಗ