ಯಾದಗಿರಿ:ಯಾದಗಿರಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸೊಸೈಟಿ, ಯಾದಗಿರಿವತಿಯಿಂದ 2023ನೇ ಸಾಲಿನ ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಯಾದಗಿರಿ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ನವೆಂಬರ್ 18 ರಂದು ನಡೆದ ಕಾರ್ಯಕ್ರಮದಲ್ಲಿ ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ವೀರನಗೌಡ ಪಾಟೀಲ್ ಅವರು ಮಾತನಾಡಿದರು.
ಚಿತ್ರಕಲೆ,ವಿಜ್ಞಾನದಲ್ಲಿ ನೂತನ ಅವಿಷ್ಕಾರ, ಶಾಸ್ತ್ರೀಯ ಸಂಗೀತ,ಸುಗಮ ಸಂಗೀತ,ಭರತನ್ಯಾಟ, ಜಾನಪದ ನೃತ್ಯ,ಕ್ಷೇತ್ರಗಳಲ್ಲಿ ಜಿಲ್ಲಾ ಮಟ್ಟದಿಂದ 14 ಮಕ್ಕಳು ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುತ್ತಾರೆ. ಕು,ಆನಂದ,ಭುವನ್,ಭೂಮಿಕಾ,ಶ್ರೇಯಸ್, ಶ್ರೀನಿವಾಸ,ವಂಷಿಕಾ,ಸಾನ್ವಿ,ಸ್ಮೀತಿಕಾ,ದಾನಿಯಾ ರುಪೀ,ಅನುಶ್ರೀ,ಗುರುಕೀರಣ ಶ್ವೇತ,ಮೈತ್ರಿ,ರವಿ ಮಕ್ಕಳು ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ ಸಂತೋಷ ವ್ಯಕ್ತಪಡಿಸಿದ್ದರು.
ಯಾದಗಿರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಡಾ.ಹಣಮಂತ್ರಾಯ ಕರಡಿ ಅವರು ಮಾತನಾಡಿ ಮಕ್ಕಳು ಉತ್ತಮವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಮಕ್ಕಳ ಪ್ರತಿಭೆಯನ್ನು ಹೊರತೆಗೆಯಲ್ಲು ಈ ಬಾಲ ಭವನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಬಹಳ ಸಂತೋಷವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲ ಭವನ ಸಂಯೋಜಕರು ಶ್ರೀ ಅನಿಲಕುಮಾರ ಜಿಲ್ಲಾ ಕಾರ್ಯಕ್ರಮ ಅವರು ಮಕ್ಕಳನ್ನು ಕರೆದುಕೊಂಡು ಹೋಗಿ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಮಾರ ರವಿ ತಂದೆ ಮಲ್ಲಿಕಾರ್ಜುನ ಅಂಧ ಬಾಲಕ ಈ ವಿಧ್ಯಾರ್ಥಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ ಮತ್ತು ಸ್ಮೀತಿಕಾ ತಂದೆ ವೆಂಕಟೇಶ ಭರತನ್ಯಾಟ ತೃತೀಯ ಹಾಗೂ ಮೈತ್ರಿ ಸುಗಮ ಸಂಗೀತ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ ನಮ್ಮ ಇಲಾಖೆ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಕ್ಕಳ ಪ್ರತಿಭೆಯನ್ನು ಬೇಳುಸುವಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಮಕ್ಕಳಿಗೆ ಇಲಾಖೆಯವತಿಯಿಂದ ಅಭಿನಂದೆನೆಗಳನ್ನು ವ್ಯಕ್ತಪಡಿಸಿದರು.
ಶ್ರೀ ಗುರುಪ್ರಸಾಧ,ಶ್ರೀ ಪ್ರಶಾಂತ,ಶ್ರೀಮತಿ ರೇಣುಕಾ ಶಿಕ್ಷಕರು,ಶ್ರೀ ಶರಭಯ್ಯ,ಶ್ರೀ ಮಧುಕುಮಾರ ನೃತ್ಯ ಶಿಕ್ಷಕರು ಹಾಗೂ ವಿವಿಧ ಶಾಲೆಯ ಮಕ್ಕಳು ಶಿಕ್ಷಕರು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ 180ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಮಕ್ಕಳ ಸಂತೋಷವ್ಯಕ್ತಪಡಿಸಿದರು.
ವರದಿ:ಶಿವರಾಜ ಸಾಹುಕಾರ ವಡಗೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.