ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹುಟ್ಟಿದ ಮೇಲೆ ಸಾಯಲೇಬೇಕು ಸತ್ತರೂ ಹೆಸರು ಉಳಿಯಬೇಕು:ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಯಾದಗಿರಿ:ಮಲ್ಲಾ ಬಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ವೃತ ಉದ್ಘಾಟನೆ ಸಮಾರಂಭದ ಅಂಗವಾಗಿ ಆ ಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕೆ ಹಾಗೂ ಉದ್ಯಮಿಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ ಅವರು ಮಾತನಾಡಿ ವಾಲ್ಮೀಕಿ ಗುರುಗಳು ಜಗತ್ತಿಗೆ ರಾಮಾಯಣದಂತಹ ಮಹಾ ಗ್ರಂಥ ರಚಿಸಿದ ಮೇಧಾವಿ ಅಂತ ಗ್ರಂಥದಲ್ಲಿರುವ ತತ್ವ ಆದರ್ಶ ನಾವೆಲ್ಲರೂ ಪಾಲನೆ ಮಾಡಬೇಕು.
ಸುರಪುರದ ಶೂರರು ನಾಲ್ವಡಿ ರಾಜ ವೆಂಕಟಪ್ಪ ನಾಯಕರ ಪುಣ್ಯ ನೆಲದಲ್ಲಿ ನೆಲೆಸಿರುವ ನಾವೆಲ್ಲಾ ಪುಣ್ಯವಂತರು ಎಂದು ಹೇಳಿದರು ಮತ್ತು ಈ ಸಮುದಾಯಕ್ಕೆ ಸರಕಾರದಿಂದ ಸಾಕಷ್ಟು ಸೌಲಭ್ಯಗಳು ದೊರಕುತ್ತವೆ ಅಂತ ಸೌಲಭ್ಯಗಳನ್ನು ಊರಿನಲ್ಲಿರುವ ಮುಖಂಡರ ಅವರ ಜೊತೆಗೂಡಿ ಕೆಲಸ ಮಾಡಿದಾಗ ಸಮಾಜ ಸುಧಾರಣೆ ಆಗುತ್ತದೆ ಎಂದರು ಅದೇ ರೀತಿಯಾಗಿ ಗ್ರಾಮೀಣ ಭಾಗದ ರೈತ ಕುಟುಂಬದ ಬಡ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕು ಅದರಂತೆ ತಂದೆ ತಾಯಿಗಳು ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜವಾಗಲಿ ದೇಶವಾಗಲಿ ಮುಂದೆ ಬರಲು ಸಾಧ್ಯ ಎಂದರು ಮತ್ತು ನಮ್ಮ ಸರಕಾರ ಬಡವರಿಗೆ ಆರ್ಥಿಕ ಪರಿಸ್ಥಿತಿಯಿಂದ ಹೊರಬರಲಿ ಒಳ್ಳೆಯ ಜೀವನಕ್ಕೆ ದಾರಿಯಾಗಲಿ ಎಂದು ಐದು ಗ್ಯಾರಂಟಿ ಯೋಜನೆಗಳನ್ನು ತಂದಿದೆ ಮತ್ತು ಕೊಟ್ಟ ಮಾತಿನಂತೆಯು ನಡೆದುಕೊಂಡು ಬಂದಿದೆ ಇದಕ್ಕೆಲ್ಲ ಕಾರಣ ನಮ್ಮ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಎಂದು ಸಂತೋಷ ವ್ಯಕ್ತಪಡಿಸಿದರು ಆದ್ದರಿಂದ ಗ್ರಾಮೀಣ ಭಾಗದ ಮುಖಂಡರಿಗೆ ನಿಮ್ಮ ಊರಿನಲ್ಲಿ ನೀವು ಬಡವರನ್ನು ಗುರುತಿಸಿ ಅಂತವರಿಗೆ ಸರಕಾರ ಸಹಾಯ ಮಾಡುವಂತಹ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
“ಗೊಲಪಲ್ಲಿಯ ಶ್ರೀ ವಾಲ್ಮಕಿ ಗುರುಗಳು ಮಾತನಾಡಿ”ನಮ್ಮ ಸಮಾಜದ ಎಲ್ಲರೂ ಎಲ್ಲ ಸಮಾಜದ ಜೋತೆ ಒಳ್ಳೆಯ ಬಾಂಧವ್ಯದಿಂದ ಇರಬೆಕು ಕೆಟ್ಟ ಚಟುವಟಿಕೆಯಿಂದ ದೂರ ಇರಬೇಕು ಪ್ರೀತಿ ಪ್ರೇಮ ಸಹಬಾಳ್ವೆಯಿಂದ ಬಾಳಬೇಕು ಎಂದು ಆಶೀರ್ವಚನ ನೀಡಿದರು ವೇದಿಕೆ ಮೇಲೆ ಸಮಾಜದ ಮುಖಂಡ ರಾಜಾ ಶ್ರೀ ವೀರ ರಾಯಪ್ಪ ರಾಜಾಧಣಿ ಬಲಭೀಮ ನಾಯಕ ಭೈರಮರಡಿ ವೆಂಕಟೇಶ ಬೇಟೆಗಾರ ಶಿವುಕಾಂತ ಸಾಹುಕಾರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ರೇಣುಕಾ ಗಂಡ ಶಿವಪ್ಪ ದೊರೆ ರಾಮಣ್ಣಗೌಡ ದೇಸಾಯಿ ಹಣಮಂತ್ರಾಯ ಮಾನಸೋಣಗಿ ಹಳ್ಳೆಪ್ಪ ಹವಲ್ದಾರ ಮಾಜಿ ಗ್ರಾ.ಪಂ. ಅಧ್ಯಕ್ಷರು ನಗನೂರ ಶರಣಪ್ಪ ಹದನೋರ ಮಾನೆಶನೆಪ್ಪ ದೇವಿಂದ್ರಪ್ಪ ಚಿಕ್ಕನಹಳ್ಳಿ ದೇವರಗೋನಾಲ ಬಸ್ಸು ದೋರೆ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಊರಿನ ಹಿರಿಯರು ಮುಖಂಡರು ಸುತ್ತಮುತ್ತಲಿನ ಗ್ರಾಮದ ಮುಖಂಡರು ಪೋಲೀಸ್ ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ