ಶಿವಮೊಗ್ಗ ಸೊರಬ ತಾಲ್ಲೂಕಿನ
ಚಂದ್ರಗುತ್ತಿ ಸಮೀಪದ ಹೆಜ್ಜೆ ವಕ್ಕಲಕೊಪ್ಪ, ಹೊಸಕೊಪ್ಪ,ಕಾರೇಹೊಂಡ ಗ್ರಾಮದ ಶ್ರೀ ಬನ್ನಿ ಮಹಂಕಾಳಿ ಅಮ್ಮನವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಪ್ರತಿ ಮಂಗಳವಾರ,ಶುಕ್ರವಾರ ದೇವಿಯ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಅನ್ನ ಪ್ರಸಾದ ನೀಡುವ ಪುಣ್ಯ ಕಾರ್ಯಕ್ಕೆ 24/11/2023ನೇ ಶುಕ್ರವಾರ ಚಾಲನೆ ನೀಡಲಾಯಿತು.ಭಕ್ತ ಮಹಾಶಯರು ಇನ್ನು ಮುಂದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಊರ ಗ್ರಾಮಸ್ಥರು,ಕಮಿಟಿಯವರು ತಿಳಿಸಿದ್ದಾರೆ ಈ ಗ್ರಾಮವು ಪುಟ್ಟದಾದರೂ ಇಲ್ಲಿನ ಎಲ್ಲಾ ಸೌಲಭ್ಯ ತುಂಬಾ ಚೆನ್ನಾಗಿ ಅಚ್ಚುಕಟ್ಟಾಗಿದೆ ಈ ಗ್ರಾಮದ ದೇವಸ್ಥಾಕ್ಕೆ ಮಂಗಳವಾರ,ಶುಕ್ರವಾರ ದೇವಸ್ಥಾನದ ಊಟದ ವ್ಯವಸ್ಥೆಗೆ ಸರಕಾರದ ಯಾವುದೇ ಅನುದಾನವಿಲ್ಲ ಭಕ್ತರ ಸಹಯೋಗದೊಂದಿಗೆ ನಡೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಶರತ್ ಗೌಡರ್
