ದಿನಾಂಕ: 25-11-2023 ರಂದು ಸಮಯ ಬೆಳಿಗ್ಗೆ 10:30 ನಿಮಿಷಕ್ಕೆ ಕಸಾಪ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರಾದಾರ ಅವರು ಪರಿಷತ್ ಧ್ವಜಾರೋಹಣವನ್ನು ನೆರವೇರಿಸಿದರು. ಪರಿಷತ್ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜೇವರ್ಗಿ ತಾಲೂಕಿನ ವಿವಿಧ ಅಧಿಕಾರಿಗಳು ಹಾಗೂ ಕ.ಸಾ. ಪ.ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಜೇವರ್ಗಿ ತಾಲೂಕಿನ ಈ ತತ್ವಪದಕಾರರ ಸಮ್ಮೇಳನಕ್ಕೆ ಜೇವರ್ಗಿ ತಾಲೂಕಿನ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಡಾ: ಅಜಯಸಿಂಗ್ ರವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧದಿಂದ ಹಳೆ ತಸಿಲ್ ಕಾರ್ಯಾಲಯದವರೆಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಈ ಮೆರವಣಿಗೆ ಉದ್ಘಾಟಕರಾದ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು, ದಾಸೋಹ ಮಠ ಸುಕ್ಷೇತ್ರ ಸೊನ್ನ ಹಾಗೂ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ ಶ್ರೀ ರಾಜಶೇಖರ ಬಿ ಸಾಹೂ ಸಿರಿ ತಾಲೂಕು ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅವಿಭಜಿತ ತಾಲೂಕು ಘಟಕ ಜೇವರ್ಗಿ ಮತ್ತು ಶ್ರೀ ಷಣ್ಮುಖಪ್ಪ ಸಾಹೂ ಗೋಗಿ ಮತ್ತು ಈ ಮೆರವಣಿಗೆಯಲ್ಲಿ ಹಲವಾರು ಗಣ್ಯ-ಮಾನ್ಯರು ಕನ್ನಡಪರ ಸಂಘಟನೆಗಳು,ಕಲಾವಿದರು,ಉಪಸ್ಥರಿದ್ದು ಮೆರವಣಿಗೆ ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಪ್ರಮುಖ ಘಟ್ಟವಾದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10:00 30 ನಿಮಿಷಕ್ಕೆ ಪ್ರಾರಂಭಿಸಲಾಯಿತು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಯಡ್ರಾಮಿ ಪೂಜ್ಯ ಮರಪ್ಪ ಮುತ್ಯ, ಮಲ್ಲಿಕಾರ್ಜುನ ಕಡಕೋಳ,ಕುಂಟ ಕೋಣ ಮೂಖ ಜಾಣ ನಾಟಕದ ಖ್ಯಾತಿ ಪಡೆದ ಜೇವರ್ಗಿ ರಾಜಣ್ಣನವರು ಈ ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಆಶಯ ನುಡಿಯನ್ನು ಹೇಳಿದರು ಮತ್ತು ಶ್ರೀ ಮಲ್ಲಿಕಾರ್ಜುನ ಕಡಕೋ ಸಾಹಿತಿಗಳು ಬೆಂಗಳೂರು ರವರು ಇಂದಿನ ಯುಗದಲ್ಲಿ ನಾವು ನಾವುಗಳೆಲ್ಲರೂ ಬಹಳ ಕಾಯಕ ಮತ್ತು ಬಸವಣ್ಣನ ಕಾರ್ಯಕರ್ತತ್ವದ ಆಧಾರದ ಮೇಲೆ ಸಾಗೋಣ ಮತ್ತು ಪ್ರಸ್ತುತ ಜಾತಿ ಭೇದವು ನಮ್ಮಲ್ಲಿ ತುಂಬಿ ತುಳುಕಾಡುತ್ತಿದೆ ಹಾಗಾಗಿ ನಾವೆಲ್ಲರೂ ಇದನ್ನು ಧಿಕ್ಕರಿಸೋಣ ಎಂದು ಬಹಳ ಮಾರ್ಮಿಕವಾಗಿ ನುಡಿದರು ಇದೇ ಸಂದರ್ಭದಲ್ಲಿ ಕುಂಟ ಕೋಣ ಮೂಕ ಜಾಣ ನಾಟಕದ ಖ್ಯಾತಿ ಪಡೆದ ಜೇವರ್ಗಿ ರಾಜಣ್ಣನವರು ತಮ್ಮ ರಂಗಭೂಮಿಯಲ್ಲಿ ಪಟ್ಟ ಶ್ರಮ ,ಕಷ್ಟಗಳು, ಹಲವಾರು ರೀತಿಯ ಏಳು ಬೀಳಿನ ಅನುಭವಗಳನ್ನು ಹೇಳಿ ಕೊನೆಗೆ ಜೇವರ್ಗಿ ತಾಲೂಕಿನ ಕುಂಟ ಕೋಣ ಮೂಕ ಜಾಣ ಎಂಬ ನಾಟಕವನ್ನು ಪ್ರದರ್ಶಿಸಿದರು.
ಗೋಷ್ಠಿ ೧ ರ ಅಧ್ಯಕ್ಷರಾದ ಡಾಕ್ಟರ್ ಚಂದ್ರಕಲಾ ಬಿದರಿ ಯವರು ತತ್ವಪದ ಸಾಹಿತ್ಯದ ಬಗ್ಗೆ ಸವಿವರವಾಗಿ ಹೇಳಿದರು ಹಾಗೂ ಗೋಷ್ಠಿ ೨ ರ ಅಧ್ಯಕ್ಷ ಸ್ಥಾನ ವಹಿಸಿದ ಡಾ:ಧರ್ಮಣ್ಣ ಕೆ ಬಡಿಗೇರ್ ರವರು ತತ್ವಪದ ಬಗ್ಗೆ ತಮ್ಮ ಸಾಹಿತ್ಯ ಕೃತಯ ಮೂಲಕ ತಿಳಿಸಿದರು. ಸಾಹಿತಿಗಳ ಉಪನ್ಯಾಸವನ್ನು ಜರುಗಿದವು ಈ ಗೋಷ್ಠಿ ಒಂದರ ಕಾರ್ಯಕ್ರಮದಲ್ಲಿ ಮುಖ್ಯ ಉಪಾನ್ಯಾಸಕರಾಗಿ ಶ್ರೀ ಸಾಹೇಬಗೌಡ ಬಿರೇದಾರ ಸಾಹಿತಿಗಳು ಯಾದಗಿರವರು ಜೀವರ್ಗಿ ತಾಲೂಕಿನ ತತ್ವಪದಕಾರರ ವಿಷಯದನ್ವಯದ ಮೇಲೆ ಕಡಕೋಳ ಮಡಿವಾಳಪ್ಪನವರು ಹಾಗೂ ಅರಳಗುಂಡಗಿಯ ಶ್ರೀ ಶರಣಬಸಪ್ಪನವರ ಹಾಗೂ ತಮ್ಮ ತಂದೆಯವರ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಬಹಳ ಮಾರ್ಮಿಕವಾಗಿ ಸ್ವಚ್ಛ ಮನಸ್ಸಿನಿಂದ ಈ ಜಗತ್ತಿನ ಏಳು- ಬೀಳು, ಕಷ್ಟ- ಸುಖ , ನೋವು – ನಲಿವು ,ಜಾತಿ -ಭೇದ ಹೆಪ್ಪುಗಟ್ಟಿದ ಸಮಾಜದ ಬಗ್ಗೆ ತತ್ವಪದ ಸಾಹಿತ್ಯದ ಮುಖಾಂತರ ಮಾರ್ಮಿಕವಾಗಿ ನುಡಿಗಳನ್ನು ಹೇಳಿದರು. ಗೋಷ್ಠಿ ಒಂದರ ಮುಖ್ಯ ಅತಿಥಿಗಳಾಗಿ ಡಾ: ಪಿ ಎಂ. ಮಠ ಹಾಗೂ ನ್ಯಾಯವಾದಿಗಳಾದ ಸಿದ್ದು ಯಂಕಂಚಿಯವರಿದ್ದರು. ಘೋಷ್ಠಿ ೨ ರ ಅಧ್ಯಕ್ಷ ಸ್ಥಾನ ವಹಿಸಿರುವ ಧರ್ಮಣ್ಣ ಕೆ ಬಡಿಗೇರ್ ಅವರು ಅಧ್ಯಕ್ಷೀಯ ಭಾಷೆಯನ್ನು ಬಹಳ ಅರ್ಥಪೂರ್ಣವಾಗಿ ಹೇಳಿದರು.
ಈ ಕಾರ್ಯಕ್ರಮವು ತತ್ವಪದ ಗಾಯನ ಪ್ರದರ್ಶನವನ್ನು ಶ್ರೀ ಬಾಬುರಾವ್ ಕೋಬಾಳ್ ಹಿರಿಯ ಕಲಾವಿದರು ಹಾಗೂ ಸಂಗಡಿಗರು ಅದ್ಭುತವಾಗಿ ಗಾಯನ ಅಥವಾ ಸಂಗೀತವನ್ನು ಪ್ರದರ್ಶನ ಮಾಡಿದರು ಈ ಕಾರ್ಯಕ್ರಮದಲ್ಲಿ ಕಸಪ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರಾದಾರ ಅವರು ಹಾಗೂ ಪದಾಧಿಕಾರಿಗಳು ಸಂಘಟನೆಗಾರರು ವಿದ್ಯಾರ್ಥಿ /ವಿದ್ಯಾರ್ಥಿನೀಯರು ಕಾಲೇಜ್ ಪ್ರಾಚಾರ್ಯರು,ಸಂಗಟನೆಯ ಮುಖಂಡರು,ಪತ್ರಕರ್ತರು ಎಲ್ಲರೂ ಈ ಕಾರ್ಯಕ್ರಮದ ಉಪಸ್ಥಿತರಿದ್ದು ನಮ್ಮನ್ನು ಸಹಕರಿಸಿದ್ದಕ್ಕಾಗಿ ಅನಂತ ಕೋಟಿ ಧನ್ಯವಾದಗಳು ಎಂದು ಶ್ರೀ ಎಸ್ ಕೆ ಬಿರಾದಾರ ವರು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಪದಾಧಿಕಾರಿಗಳಾದ
ಶ್ರೀ ರೇವಣಸಿದ್ದಪ್ಪ ಎಂ ಸಂಕಾಲಿ,ಸಿದ್ದು ಯಂಕಂಚಿ,ರಾಜು ಮುದ್ದಡಗಿ,ಸುರೇಶ ಹಿರೇಮಠ,ಸಂಗಮೇಶ ಸಂಕಾಲಿ,ಸುರೇಶ ಪಾಟೀಲ್,ಭೀಮು ಗುತ್ತೆದಾರ,ಈಶ್ವರ ಹಿಪ್ಪರಗಿ,ಶಾಂತಪ್ಪ ಕೂಡಲಗಿ,ಮಲ್ಲು ರಾಸಣಗಿ,ಶ್ರೀ ಹರಿ,ಜಗನ್ನಾಥ ಇಮ್ಮಣ್ಣಿ ಹಾಗೂ ಎಲ್ಲಾ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್.