ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರೀಯ ಸಂವಿಧಾನದ ಸಮರ್ಪಣಾ ದಿವಸ ಆಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ ಅವರು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು ಹಾಗೂ ಸಂವಿಧಾನದ ಮೂಲ ಪ್ರತಿಜ್ಞಾವಿಧಿ ಬೋಧಿಸಿದರು ಹಾಗೂ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸಂವಿಧಾನ ಅಂಗೀಕಾರವಾಗಿದ್ದು 1949 ನವೆಂಬರ್ 26ರಂದು ಹಾಗೂ ಸಂವಿಧಾನ ಜಾರಿಯಾಗಿದ್ದು 1950 ಜನವರಿ 26ರಂದು ಆದಕಾರಣ ನವೆಂಬರ್ 26ರಂದು ಸಂವಿಧಾನ ಸಮರ್ಪಣಾ ದಿನವನ್ನಾಗಿ ನಮ್ಮ ದೇಶದಲ್ಲಿ ಆಚರಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ತಿಮ್ಮಯ್ಯ ಬಿ ದಂಡಗುಲ್ಕರ ಹಾಗು ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದ ಅಧ್ಯಕ್ಷರು ಮೈಲಾರಿ ಎಂ ಹೊಸಮನಿ ಅವರು ಭಾಗವಹಿಸಿದ್ದರು ಹಾಗೂ ಮಲ್ಲಣ್ಣ ಗೌಡ ಕೊಡಮನಹಳ್ಳಿ ಅವರು ಭಾಗವಹಿಸಿದ್ದರು ಗ್ರಾಮ ಪಂಚಾಯತ್ ಸಿಬ್ಬಂದಿ ಜಟ್ಟಪ್ಪ ಪೂಜಾರಿ ಜಮಖಂಡಿ ಅವರು ಭಾಗವಹಿಸಿದ್ದರು ಮುತ್ತಪ್ಪ ಶಿವಾಯ ನಮಃ ಮಲ್ಕಪ್ಪ ಬೀಳವಾರ್ ಶ್ರೀಶೈಲ್ ಮ್ಯಾಗೇರಿ ಅವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.