ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪೂರ ಡಿಜಿಟಲ್ ಗ್ರಂಥಾಲಯದ ಆವರಣದಲ್ಲಿ ಕರಾಟೆ ಪಿತಮಹರಾದ ಬ್ರೂಸ್ ಲೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ವೇಳೆ ಬಿಡಿಎಸ್ ಮಾರ್ಷಲ್ ಆರ್ಟ್ಸ್ ಸಿದ್ದಾಪುರ ವಿದ್ಯಾರ್ಥಿಗಳು ಕರಾಟೆ ತರಬೇತಿದಾರು ಹಾಗೂ ಪಾಲಕರಿಂದ ಕರಾಟೆ ಪಿತಾಮಹ ಬ್ರೂಸ್ ಲೀ ಭಾವಚಿತ್ರಕ್ಕೆ ಭಾವ ಪೂರ್ವಕ ಪೂಜೆ ಸಲ್ಲಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಕರಾಟೆ ಶಿಕ್ಷಕರಾದ ಚಿರಂಜೀವಿ ಮಾತನಾಡಿ ಕರಾಟೆಯು ಮನುಷ್ಯನಲ್ಲಿ ಆತ್ಮಸ್ತೈರ್ಯ ಹಾಗೂ ಮಾನಸಿಕ ದೈಹಿಕ ಒತ್ತಡಗಳಿಂದ ದೂರ ಮಾಡಿ ಸದೃಡತೆ ಜೀವನಕ್ಕೆ ಕರಾಟೆ ಬಹು ಮುಖ್ಯ,ಹೆಣ್ಣು ಮಕ್ಕಳಲ್ಲಿ ಭಯದ ಭೀತಿಯನ್ನು ಹೊಡೆದೋಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಈ ವೇಳೆ ಕರಾಟೆ ಶಿಕ್ಷಕ,ದೈಹಿಕ ಶಿಕ್ಷಕ ಹಾಗೂ ಯೋಗ ಶಿಕ್ಷಕರಾದ ಚೀರಂಜೀವಿ ಸಿದ್ದಾಪೂರ,
ಪಾಲಕರಾದ ಸಾಯಿ,ಮೋಹಿನ್ ಹಾಗೂ ಕರಾಟೆ ತರಬೇತಿ ಪಡೆಯುವ ಮಕ್ಕಳು ಪಾಲ್ಗೊಂಡಿದ್ದರು.
