ಕೊಪ್ಪಳ:ವಸತಿ ನಿರಾಶ್ರಿತರ ಅನಿರ್ದಿಷ್ಟ ಧರಣಿ 16ನೇ ದಿನದ ಪ್ರಾರಂಭದಲ್ಲೇ ಅನಿರ್ದಿಷ್ಟ ಧರಣಿ ಸ್ಥಳಕ್ಕೆ ಸಹಾಯಕ ಆಯುಕ್ತರು ತಹಶೀಲ್ದಾರರು ಕೊಪ್ಪಳ ನಗರ ಸಭೆ ಪೌರಯುಕ್ತರು ಭೇಟಿ ನೀಡಿ
ನಮ್ಮ ಮನವಿ ಪತ್ರ ಸ್ವೀಕಾರ ಮಾಡಿ,ಮಾತನಾಡಿ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ ನಾವು ಆಶ್ರಯ ಕಮಿಟಿ ಅಧ್ಯಕ್ಷರ ಜೊತೆ ಚರ್ಚಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರು.
ತದನಂತರ ಧರಣಿಯಲ್ಲಿ ಭಾಗವಹಿಸಿದ ಬಂಡಾಯ ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಅಲ್ಲಮ ಪ್ರಭು ಬೆಟ್ಟದೂರ ಅವರು ಮಾತನಾಡಿ, ಎದ್ದೇಳು ಕರ್ನಾಟಕ ಮೂಲಕ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಾವು ಸ್ಲಂ ಏರಿಯಕ್ಕೆ ಮತಯಾಚನೆಗೆ ಬಂದಾಗ ನಾವು ನಿಮಗೆ ಭರವಸೆ ಕೊಟ್ಟಿದ್ವೀ ನಾವು ನಿಮಗೆ ನಿವೇಶನ ಕೊಡುಸುವುದಾಗಿ ಅದರಂತೆ ನಾನು ಸಹ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಶಾಸಕರ ಗಮನಕ್ಕೆ ನಾನೆ ಖುದ್ದಾಗಿ ಪೋನ್ ಕರೆ ಮಾಡಿ ಮಾತನಾಡಿದ್ದೇನೆ ನಿಮ್ಮ ಎದುರಲ್ಲೇ ಮತ್ತೊಂದು ಬಾರಿ ಸಚಿವರಿಗೆ ಶಾಸಕರಿಗೆ ಕರೆ ಮಾಡುತ್ತೇನೆ ಎಂದು ಅನಿರ್ದಿಷ್ಟ ಧರಣಿಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಶಾಸಕರಿಗೆ ಕರೆ ಮಾಡಿ ಮಾತನಾಡಿದರು,ಸಚಿವರು ಮತ್ತು ಶಾಸಕರು ನಾಳೆ ನಮ್ಮ ಅನಿರ್ದಿಷ್ಟ ಧರಣಿ ಸ್ಥಳಕ್ಕೆ ಬರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ Tuci ರಾಜ್ಯ ಕಾರ್ಯದರ್ಶಿ ಕೆ.ಬಿ. ಗೋನಾಳ,ಅಲೆಮಾರಿ ಜಿಲ್ಲಾಧ್ಯಕ್ಷ ಸಂಜಯದಾಸರ ಕೌಜಗೇರಿ,ಕರ್ನಾಟಕ ಭೀಮ್ ಆರ್ಮಿ ಜಿಲ್ಲಾಧ್ಯಕ್ಷರ ನಿಂಗು ಜಿ ಎಸ್ ಬೆಣಕಲ್,ಪ್ರವೀಣ ಕನ್ನಾರಿ, ಗವಿಸಿದ್ದಪ್ಪ ಚಿಕ್ಕೇನಕೊಪ್ಪ,ವೀರೇಶ ಕಟ್ಟಿಮನಿ,
ದುರಗಪ್ಪ ಪೂಜಾರಿ,ಗಾಳೇಪ್ಪ ಮಂಗೋಲಿ, ರಾಮಲಿಂಗ ಶಾಸ್ತ್ರಿ,ವಸತಿ ನಿರಾಶ್ರಿತ ತಾಯಂದಿರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.