ಡಾ.ಬಿ.ಆರ್.ಅಂಬೇಡ್ಕರ್ ಅವರ”ಶಿಕ್ಷಣ ಅನ್ನುವುದು ಹುಲಿಯ ಹಾಲಿನಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು” ಈ ಮಾತು ಇಲ್ಲಿ ನೆನಪು ಮಾಡಿಕೊಂಡು ಈ ವಿಷಯ ಪ್ರಾರಂಭಿಸೋಣ.
ಶಿಕ್ಷಣ ಅನ್ನುವುದು ದೇಶದ ಪ್ರಗತಿಯ ಸಂಕೇತ, ಇಂತಹ ಶಿಕ್ಷಣ ವ್ಯವಸ್ಥೆ ಮೇಲೆ ರಾಜಕೀಯ ಮತ್ತು ಕೋಮುವಾದ ಕರಿಛಾಯೆ ಪದೆ ಪದೆ ಈ ಶಿಕ್ಷಣ ವ್ಯವಸ್ಥೆಯ ಮೇಲೆ ಬಿಳುತ್ತಾ ಶಿಕ್ಷಣ ಅನ್ನುವುದು ನಿಧಾನವಾಗಿ ರಾಜಕೀಯದ ಜೊತೆ ಧರ್ಮವು ಕಳೆದ ಬಾರಿ ಶಾಲಾ ಆವರಣವನ್ನು ಅಷ್ಟೇ ಅಲ್ಲ ಶಾಲಾ ಕೊಠಡಿಗಳನ್ನು ಪ್ರವೇಶ ಮಾಡಿ ಅನೇಕ ರಾಜಕೀಯ ಜಂಜಾಟಗಳಿಂದ ಕೂಡಿ ಅಂತ್ಯವಾಯಿತು ಅನ್ನುವ ಅಷ್ಟೋತ್ತರ ಹೊತ್ತಿಗೆ ಮತ್ತೆ ಪಠ್ಯ ಪರಿಷ್ಕರಣೆ ರೂಪದಲ್ಲಿ ಬಂತು ಈಗ ಇದು ಮುಗಿಯುವ ವೇಳೆಗೆ ಮತ್ತೆ ಕೋಮುವಾದಕ್ಕೆ ಅಂಟಿಕೊಂಡಿರುವಂತಹ ಬಾಂಬ್ ಬೆದರಿಕೆಯ ಇ ಮೇಲ್ ಪತ್ರಗಳು ರಾಜ್ಯ ರಾಜಧಾನಿ ಬೆಂಗಳೂರಿನ ಸುಮಾರು 66 ಶಾಲೆಗಳ ಕದ ತಟ್ಟಿವೆ.ಇಂತಹ ಘಟನೆಗಳು ಇಡಿ ಮನುಕುಲಕ್ಕೆ ಮಾರಕವಾಗುವುದರ ಜೊತೆಗೆ ಧರ್ಮಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯವನ್ನು ಆಳುಮಾಡುವುದಲ್ಲದೇ ದೇಶದ ಭವಿಷ್ಯದ ಭರವಸೆಗಳನ್ನು ಬತ್ತಿಸುವ ಕೆಲಸ ಮಾಡಲಾರಂಭಿಸಿವೆ ಮತ್ತು ಎಲ್ಲಾ ಶಾಲೆಗಳು ಖಾಸಗಿ ಶಾಲೆಗಳಾಗಿರುವುದರಿಂದ ಆಡಳಿತ ಮಂಡಳಿಯವರು ಕೈಗೊಂಡಿರುವ ಸಣ್ಣ ಪುಟ್ಟ ಸುರಕ್ಷಾ ನಿಯಮಗಳು ಅವರನ್ನು ಎಚ್ಚರಿಸಿವೆ,ಆದರೆ ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ರಾಜ್ಯದ ಸರ್ಕಾರಿ ಶಾಲೆಗಳು ಶಕ್ತವಾಗಿದ್ದಾವೇಯೇ ಎನ್ನುವುದನ್ನು ಯಾವುದೇ ರಾಜಕೀಯ ಮಾಡದೇ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮೆ ಇತ್ತ ಗಮನಹರಿಸಬೇಕಿದೆ ಹಾಗೆಯೇ ಶಿಕ್ಷಣ ವ್ಯವಸ್ಥೆಯನ್ನು ರಾಜಕೀಕರಣಗೊಳಿಸದೆ ಶಿಕ್ಷಣವನ್ನು ಶಿಕ್ಷಣವಾಗಿರಲು ಬಿಡುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗಳಿಗೆ ನಮ್ಮ ನಾಡು ನುಡಿಯ ಜೊತೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಬಲಿದಾನಗಳನ್ನು ತಿಳಿಸುತ್ತಾ ದೇಶಾಭಿಮಾನದ ಅಭಿಮಾನ ಸದಾ ಜೀವಂತವಾಗಿರುವಂತೆ ಪ್ರೇರಣೆಯನ್ನು ನೀಡುತ್ತಾ ಅಭಿವೃದ್ಧಿಶೀಲವಾಗಿರುವ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳಂತೆ ಪುಟಿದೇಳುವ ಭರವಸೆಯನ್ನು ಬೆಳೆಸುವ ಭವ್ಯವಾದ ಪರಂಪರೆ ಯನ್ನು ನಿರ್ಮಿಸುವತ್ತ ನಮ್ಮನು ಆಳುವ ಆಡಳಿತ ಯಂತ್ರಗಳು ಧರ್ಮಗಳ ಓಲೈಕೆ ಬಿಟ್ಟು ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದರ ಜೊತೆಗೆ ಜಾತ್ಯತೀತ,ಸಾಮಾಜಿಕತೆ ಇಂದ ಕೂಡಿದ ಸದೃಢವಾದ ಮತ್ತು ಶಾಂತಿಯುತ ಸಮಾಜದ ಜವಾಬ್ದಾರಿಯುತ ಚಿಂತನೆಯನ್ನು ದೇಶದ ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆಯಾಗಿದೆ ಎನ್ನಬಹುದು ಹಾಗೆಯೇ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಳ್ಳುವ ಯಾವುದೇ ವ್ಯಕ್ತಿಯಾಗಲಿ ಅಥವಾ ಸಂಘಟನೆಯಾಗಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯಕ್ಕೆ ಭರವಸೆಯಾಗಬೇಕಿದೆ.
ಲೇಖಕರು-ಹೊಳೆಯಪ್ಪ ಕರಡಿ,
ಹೆಚ್ ಜಿ ರಾಮುಲು ನಗರ,ಗಂಗಾವತಿ